Friday, June 5, 2026
Homeತಾಜಾ ಸುದ್ದಿದರ್ಶನ್ ಗೆ ಪವಿತ್ರಾ ಗೌಡ 2ನೇ ಪತ್ನಿಯಲ್ಲ; ಕಮಿಷನರ್‌ ಗೆ ವಿಜಯಲಕ್ಷ್ಮೀ ಬರೆದ ಪತ್ರದಲ್ಲೇನಿದೆ?

ದರ್ಶನ್ ಗೆ ಪವಿತ್ರಾ ಗೌಡ 2ನೇ ಪತ್ನಿಯಲ್ಲ; ಕಮಿಷನರ್‌ ಗೆ ವಿಜಯಲಕ್ಷ್ಮೀ ಬರೆದ ಪತ್ರದಲ್ಲೇನಿದೆ?

- Advertisement -
- Advertisement -

ಬೆಂಗಳೂರು: ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಪವಿತ್ರಾ ಗೌಡ ಹಾಗೂ ದರ್ಶನ್ ಸಂಬಂಧದ ಕುರಿತು ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದು, ಪವಿತ್ರಾಗೌಡ ದರ್ಶನ್‌ನ 2ನೇ ಪತ್ನಿಯಲ್ಲ. ಆಕೆ ಸ್ನೇಹಿತೆ ಅಷ್ಟೇ. ನಾನೇ ದರ್ಶನ್‌ ಧರ್ಮ ಪತ್ನಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನಟಿ ಪವಿತ್ರಾ ಗೌಡ ಅವರನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಪೊಲೀಸ್ ಕಮೀಷನರ್ ದಯಾನಂದ್ ಪವಿತ್ರಾ ಗೌಡ ಅವರನ್ನು ದರ್ಶನ್ ಅವರ ಎರಡನೇ ಪತ್ನಿ ಎಂದು ಉಲ್ಲೇಖಿಸಿದ್ದರು. ಅದಕ್ಕೆ ಸಂಬಂಧಪಟ್ಟಂತೆ ವಿಜಯಲಕ್ಷ್ಮೀ ಅವರು ಕಮೀಷನರ್ ಅವರಿಗೆ ಮನವಿ ಪತ್ರವೊಂದನ್ನು ಬರೆದಿದ್ದಾರೆ.

ವಿಜಯಲಕ್ಷ್ಮೀ ಅವರು ಬರೆದ ಮನವಿ ಪತ್ರದಲ್ಲಿ, “ದರ್ಶನ್‌ ಮತ್ತು ನಾನು 2003ರಲ್ಲಿ ಧರ್ಮಸ್ಥಳದಲ್ಲಿ ಮದುವೆ ಆಗಿದ್ದೇವೆ. ನಮಗೆ ಒಬ್ಬ ಮಗ ಇದ್ದಾನೆ. ಪವಿತ್ರಾ ಗೌಡ ದರ್ಶನ್‌ ನ 2ನೇ ಪತ್ನಿ ಅಲ್ಲ. ಕೇವಲ ಸ್ನೇಹಿತೆ ಅಷ್ಟೇ. ಪವಿತ್ರಾ ಗೌಡಗೆ ಈಗಾಗಲೇ ಸಂಜಯ್‌ ಸಿಂಗ್‌ ಎಂಬವರ ಜತೆ ಮದುವೆಯಾಗಿದ್ದು, ಒಬ್ಬಳು ಮಗಳು ಕೂಡ ಇದ್ದಾಳೆ. ಕಾನೂನು ಪ್ರಕಾರ ನಾನು ಮಾತ್ರ ದರ್ಶನ್‌ನ ಏಕೈಕ ಪತ್ನಿ. ಪವಿತ್ರಾಗೌಡ ದರ್ಶನ್‌ನ 2ನೇ ಪತ್ನಿ ಎಂದು ಹೇಳುತ್ತಿರುವುದಕ್ಕೆ ನನಗೆ ನೋವಾಗಿದೆ,” ಎಂದು ತಿಳಿಸಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ವಿಜಯಲಕ್ಷ್ಮೀ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

- Advertisement -

Latest News

error: Content is protected !!