Wednesday, June 3, 2026
Homeತಾಜಾ ಸುದ್ದಿಮಾಜಿ ಸಿಎಂ ವೀರಪ್ಪ ಮೊಯ್ಲಿ  ಪುತ್ರಿ ಹಂಸ ಮೊಯ್ಲಿ ವಿಧಿವಶ

ಮಾಜಿ ಸಿಎಂ ವೀರಪ್ಪ ಮೊಯ್ಲಿ  ಪುತ್ರಿ ಹಂಸ ಮೊಯ್ಲಿ ವಿಧಿವಶ

- Advertisement -
- Advertisement -

ಬೆಂಗಳೂರು: ಮಾಜಿ ಸಿಎಂ ವೀರಪ್ಪ ಮೊಯ್ಲಿ  ಪುತ್ರಿ ಹಂಸ ಮೊಯ್ಲಿ (46) ವಿಧಿವಶರಾಗಿದ್ದಾರೆ. ವೀರಪ್ಪ ಮೊಯಿಲಿ ಪುತ್ರಿ ಹಂಸ ಮೊಯಿಲಿ ನಿನ್ನೆ ಸಂಜೆ ಬೆಂಗಳೂರಿನಲ್ಲಿ ಮೃತರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹಂಸ ಅವರಿಗೆ ಹೃದಯಾಘಾತ ಸಂಭವಿಸಿತ್ತು ಎಂದು ಹೇಳಲಾಗಿದ್ದು, ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮೃತಪಟ್ಟಿದ್ದಾರೆ.

ಪುತ್ರಿಯ ನಿಧನದಿಂದಾಗಿ ಛತ್ತೀಸ್ ಘಡ ಪ್ರವಾಸದಲ್ಲಿದ್ದ ವೀರಪ್ಪ ಮೊಯಿಲಿ ನಿನ್ನೆ ರಾತ್ರಿಯೇ ಬೆಂಗಳೂರಿಗೆ ವಾಪಾಸ್ ಆಗಿದ್ದು, ನಾಳೆ ಬೆಳಿಗ್ಗೆ ಅಂತ್ಯ ಸಂಸ್ಕಾರ ನಡೆಸಲು ಕುಟುಂಬ ತೀರ್ಮಾನಿಸಿದೆ ಎನ್ನಲಾಗಿದೆ.

ಭರತನಾಟ್ಯ ನೃತ್ಯ ಕಲಾವಿದೆಯಾಗಿದ್ದ ಹಂಸ ಕೊರಿಯೋಗ್ರಾಫರ್ ಕೂಡಾ ಆಗಿದ್ದರು. ದೇವದಾಸಿಯರ ಕುರಿತಾದ ಶ್ರೀರಂಗಂ ತಮಿಳು ಚಲನಚಿತ್ರದಲ್ಲಿ ಕೂಡಾ ಹಂಸ ಮೊಯಿಲಿ ನಟಿಸಿದ್ದರು.

- Advertisement -

Latest News

error: Content is protected !!