Saturday, June 6, 2026
Homeತಾಜಾ ಸುದ್ದಿಹೆಣ್ಮಕ್ಕಳನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಜ್ವಲ್ ರೇವಣ್ಣ 15ಕ್ಕೂ ಹೆಚ್ಚು ಸಿಮ್ ಕಾರ್ಡ್ ಗಳನ್ನು ಬಳಸುತ್ತಿದ್ದರು;...

ಹೆಣ್ಮಕ್ಕಳನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಜ್ವಲ್ ರೇವಣ್ಣ 15ಕ್ಕೂ ಹೆಚ್ಚು ಸಿಮ್ ಕಾರ್ಡ್ ಗಳನ್ನು ಬಳಸುತ್ತಿದ್ದರು; ಸಿಐಡಿ ಅಧಿಕಾರಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

- Advertisement -
- Advertisement -

ಬೆಂಗಳೂರು : ಹೆಣ್ಮಕ್ಕಳನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಜ್ವಲ್ ರೇವಣ್ಣ 15ಕ್ಕೂ ಹೆಚ್ಚು ಸಿಮ್ ಕಾರ್ಡ್ ಗಳನ್ನು ಬಳಸುತ್ತಿದ್ದರು ಎಂಬ ಸ್ಫೋಟಕ ವಿಚಾರ ಸಿಐಡಿ ಅಧಿಕಾರಗಳ ವಿಚಾರಣೆ ವೇಳೆ ಬಹಿರಂಗವಾಗಿದೆ.

ಸದ್ಯ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕನೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳು ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಮಹಿಳೆಯರಿಗೆ ಕರೆ ಮಾಡಲು ಪ್ರಜ್ವಲ್ ರೇವಣ್ಣ ಬರೋಬ್ಬರಿ 15  ಸಿಮ್ ಕಾರ್ಡ್ ಗಳನ್ನು ಬಳಸುತ್ತಿದ್ದರು ಅನ್ನೋದು ಗೊತ್ತಾಗಿದೆ.

ಮಹಿಳೆಯರು ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್‌ನಿಂದ ಕಾಲ್ ಮಾಡಿ, ನಗ್ನ, ಅರೆನಗ್ನ, ಫೋಟೋ , ವೀಡಿಯೋ ಕಳುಹಿಸುವಂತೆ ಪೀಡಿಸುತ್ತಿದ್ದರಂತೆ. ಕಳುಹಿಸದೇ ಇದ್ರೆ ವಿಡಿಯೋ ವೈರಲ್ ಮಾಡೋ ಬೆದರಿಕೆ ಹಾಕುತ್ತಿದ್ದನಂರೆ. ಪ್ರಜ್ವಲ್‌ಗೆ ಬೆದರಿ ಸಂತ್ರಸ್ತೆಯರು ಫೋಟೋ, ವೀಡಿಯೋಗಳನ್ನು ಕಳುಹಿಸುತ್ತಿದ್ದರು. ಕೆಲಸ ಕೇಳಿಕೊಂಡು ಬಂದವರು, ಮಕ್ಕಳಿಗೆ ಸೀಟ್‌ಗಾಗಿ ಬಂದವರು, ಕೆಲ ಪರಿಚಿತರ ಪತ್ನಿಯರನ್ನೇ ಪ್ರಜ್ವಲ್ ಟಾರ್ಗೆಟ್ ಮಾಡುತ್ತಿದ್ದರು.

- Advertisement -

Latest News

error: Content is protected !!