Wednesday, June 3, 2026
Homeಪ್ರಮುಖ-ಸುದ್ದಿಪಿಕಪ್ ಬಾಡಿಗೆ ಪಡೆಯದೇ ಬೈಕ್ ನಲ್ಲಿ ತೆರಳಿದ್ದಕ್ಕೆ ಪಟ್ಟ ಬೆಟ್ಟದಲ್ಲಿ ದ.ಕ. ಮೂಲದ ಪ್ರವಾಸಿಗರ ಮೇಲೆ...

ಪಿಕಪ್ ಬಾಡಿಗೆ ಪಡೆಯದೇ ಬೈಕ್ ನಲ್ಲಿ ತೆರಳಿದ್ದಕ್ಕೆ ಪಟ್ಟ ಬೆಟ್ಟದಲ್ಲಿ ದ.ಕ. ಮೂಲದ ಪ್ರವಾಸಿಗರ ಮೇಲೆ ಪಿಕಪ್ ಚಾಲಕರಿಂದ ಹಲ್ಲೆ

- Advertisement -
- Advertisement -

ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಪಟ್ಲ ಬೆಟ್ಟದಲ್ಲಿ ದಕ್ಷಿಣ ಕ‌ನ್ನಡ ಜಿಲ್ಲೆಯ ಪ್ರವಾಸಿಗರ ಮೇಲೆ ಹಲ್ಲೆ ನಡೆದಿದೆ.

ಜೂನ್ 23 ರಂದು ಈ ಘಟನೆ ನಡೆದಿದ್ದು, ಬೈಕ್ ನಲ್ಲಿ ತೆರಳಿದ್ದ ಪ್ರವಾಸಿಗರ ಮೇಲೆ ಸ್ಥಳೀಯ ಪಿಕಪ್ ವಾಹನ ಚಾಲಕರಿಂದ ಹಲ್ಲೆ ನಡೆದಿದೆ.

ಪಿಕಪ್ ವಾಹನಗಳನ್ನು ಬಾಡಿಗೆಗೆ ಪಡೆದು ತೆರಳದೇ ಯುವಕರು ತಮ್ಮದೇ ಬೈಕ್ ಗಳಲ್ಲಿ ತೆರಳಿದ್ದಕ್ಕೆ ಪ್ರಶ್ನೆ ಮಾಡಿ ಪಿಕಪ್ ಚಾಲಕರು ಹಲ್ಲೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಮೂಲದ ಪ್ರವಾಸಿಗ ಭುವಿತ್ ಪೂಜಾರಿ ಎಂಬವರು ಪೊಲೀಸ್ ದೂರು ದಾಖಲಿಸಿದ್ದು, ಹಲ್ಲೆ ಆರೋಪಿಗಳಾದ ಗಗನ್, ಕಿರಣ್, ನಿಶಾಂತ್ ಮತ್ತು ಮದನ್ ಎಂಬುವವರ ಮೇಲೆ ಯಸಳೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ. ಯಸಳೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!