Monday, June 8, 2026
Homeಕರಾವಳಿಮಂಗಳೂರುಲೋಕಸಭಾ ಸದಸ್ಯರಾಗಿ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ ಮತ್ತು ಕ್ಯಾ. ಬ್ರಿಜೇಶ್ ಚೌಟ ಪ್ರಮಾಣ...

ಲೋಕಸಭಾ ಸದಸ್ಯರಾಗಿ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ ಮತ್ತು ಕ್ಯಾ. ಬ್ರಿಜೇಶ್ ಚೌಟ ಪ್ರಮಾಣ ವಚನ ಸ್ವೀಕಾರ

- Advertisement -
- Advertisement -

ನವದೆಹಲಿ: ಲೋಕಸಭಾ ಸದಸ್ಯರಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಮತ್ತು ಶೋಭಾ ಕರಂದ್ಲಾಜೆ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕೋಟ ಶ್ರೀನಿವಾಸ ಪೂಜಾರಿ ಪ್ರಮಾಣ ವಚನ ಸ್ವೀಕಾರದ ವೇಳೆ ಕನ್ನಡದ ಶಾಲು ಧರಿಸಿದ್ದರು

ಇನ್ನು ಕೇಸರಿ ಶಾಲು ಮತ್ತು ಪಂಚೆ ಧರಿಸಿ ತುಳುನಾಡಿದ ದೈವ ದೇವರುಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದ ಬ್ರಿಜೇಶ್ ಚೌಟ, ಮಾತೆರೆಗ್ಲಾ ಸೊಲ್ಮೆಲು ಎಂದು ತುಳು ಭಾಷೆಯಲ್ಲಿ ಉಚ್ಚರಿಸಿದರು.

ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಿದ್ದು, ಇಂದು ಮತ್ತು ನಾಳೆ ಎಲ್ಲಾ ಸದಸ್ಯರ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ.ರಾಜ್ಯದ ಬಹುತೇಕ ಎಲ್ಲಾ ಸಂಸದರು ಇಂದು ಕನ್ನಡ ಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು.

- Advertisement -

Latest News

error: Content is protected !!