Saturday, June 6, 2026
Homeತಾಜಾ ಸುದ್ದಿಸಿಐಡಿ ಕಚೇರಿಯಲ್ಲಿ ಒಂದೇ ಬಾರಿಗೆ ವಿಚಾರಣೆಗೆ ಹಾಜರಾದ ಬಿಸ್ವೈ, ರೇವಣ್ಣ, ಪ್ರಜ್ವಲ್ ರೇವಣ್ಣ

ಸಿಐಡಿ ಕಚೇರಿಯಲ್ಲಿ ಒಂದೇ ಬಾರಿಗೆ ವಿಚಾರಣೆಗೆ ಹಾಜರಾದ ಬಿಸ್ವೈ, ರೇವಣ್ಣ, ಪ್ರಜ್ವಲ್ ರೇವಣ್ಣ

- Advertisement -
- Advertisement -

ಬೆಂಗಳೂರಿನ ಸಿಐಡಿ ಕಚೇರಿ ಇವತ್ತು ಅಚ್ಚರಿಯ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ರಾಜ್ಯ ಮೂವರು ರಾಜಕೀಯ ನಾಯಕರು ಒಂದೇ ಬಾರಿಗೆ ಹಾಜರಾಗಿ ಅಚ್ಚರಿ ಮೂಡಿಸಿದ್ರು.

ತಮ್ಮ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇವತ್ತು ವಿಚಾರಣೆ ಹಾಜರಾಗೋದಾಗಿ ಬಿಎಸ್ವೈ ಸಿಐಡಿ ಅಧಿಕಾರಿಗಳಿಗೆ ಅದರಂತೆ ಇಂದು ವಿಚಾರಣೆಗೆ ಬಂದಿದ್ದರು. ಇದೇ ವೇಳೆ ಮೈಸೂರಿನ ಕೆ.ಆರ್.ನಗರ ಮಹಿಳೆ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಕೂಡ ಸಿಐಡಿ ವಿಚಾರಣೆಗೆ ಬಂದಿದ್ದಾರೆ. ಅಲ್ಲದೇ

ಹಾಸನ  ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ವಶದಲ್ಲಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನೂ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರುಪಡಿಸಲಾಗಿದೆ. ಈ ಮೂಲಕ ಮಾಜಿ ಸಿಎಂ, ಮಾಜಿ ಸಚಿವ, ಮಾಜಿ ಸಂಸದ ಮೂವರು ಒಂದೇ ಬಾರಿಗೆ ಸಿಐಡಿ ವಿಚಾರಣೆಗೆ ಹಾಜರಾದಂತಾಗಿದೆ.

- Advertisement -

Latest News

error: Content is protected !!