Thursday, June 4, 2026
Homeತಾಜಾ ಸುದ್ದಿನಟ ಯುವರಾಜ್ ಕುಮಾರ್ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ ವಕೀಲ ಪ್ರಸಾದ್

ನಟ ಯುವರಾಜ್ ಕುಮಾರ್ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ ವಕೀಲ ಪ್ರಸಾದ್

- Advertisement -
- Advertisement -

ಬೆಂಗಳೂರು: ನಟ ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ ವಿರುದ್ಧ  ವಕೀಲ ಪ್ರಸಾದ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.ಈಗಾಗಲೇ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿರುವ ನಟ ಯುವ ರಾಜ್ ಕುಮಾರ್ ಪತ್ನಿಯಿಂದ ನನಗೆ ಮಾನಸಿಕ ಕಿರುಕುಳ ಆಗ್ತಿದೆ ಎಂದಿದ್ದಾರೆ. ಇದರ ಬೆನ್ನಲ್ಲೇ ವಕೀಲ ಪ್ರಸಾದ್ ಅವರು ಯುವ ರಾಜ್ ಕುಮಾರ್ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯುವ ರಾಜ್ ಕುಮಾರ್ ಗೆ ಶ್ರೀದೇವಿ ಭೈರಪ್ಪ ಬೆದರಿಕೆ ಹಾಕಿದ್ದಾರೆ. ಅವರು ಬೆದರಿಕೆ ಹಾಕಿರೋ ಮೆಸೇಜ್ ನಮ್ಮ ಬಳಿಯಲ್ಲಿ ಇದ್ದಾವೆ. ಅದರಲ್ಲಿ ನಿನ್ನ ನಾನು ಬಿಡೋದಿಲ್ಲ. ಸುಲಭವಾಗಿ ಡಿವೋರ್ಸ್ ತೆಗೆದುಕೊಳ್ಳೋದಕ್ಕೆ ಆಗಲ್ಲ. ನಿನ್ನನ್ನು ನಾನು ಬೀದಿಗೆ ತರುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಒಳ್ಳೆಯ ಹುಡುಗಿ ಅಲ್ಲ. ಹೀಗಿದ್ದರೂ ಯುವ ರಾಜ್ ಕುಮಾರ್ ರಿಸ್ಕ್ ತೆಗೆದುಕೊಂಡು ಮದುವೆಯಾಗಿದ್ದರು. ಇಂದಲ್ಲ ನಾಳೆ ಬದಲಾಗಬಹುದು ಎಂದು ಕಾದಿದ್ದಾರೆ. ಆದ್ರೇ ಅದು ಸಾಧ್ಯವಾಗಲಿಲ್ಲ. ಮಗು ಮಾಡಿಕೊಳ್ಳೋದಕ್ಕೆ ಶ್ರೀದೇವಿ ಹಿಂದೇಟು ಹಾಕಿದಳು. ಇದಕ್ಕಾಗಿಯೇ ಯುವನನ್ನು ಆಕೆ ಬೈಯ್ಯುತ್ತಿದ್ದಳು ಎಂದು ಆರೋಪಿಸಿದರು.

ಇದಷ್ಟೇ ಅಲ್ಲ ಶ್ರೀದೇವಿ ಭೈರಪ್ಪಗೆ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ ಇದೆ. ಆಕೆ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ಯುವ ರಾಜ್ ಕುಮಾರ್ ಅವರನ್ನು ಅಕೆಯ ಬಾಯ್ ಫ್ರೆಂಡ್ ಜೊತೆ ಕಂಪೇರ್ ಕೂಡ ಮಾಡುತ್ತಿದ್ದಳು. ಅಲ್ಲದೇ ಆತನೊಂದಿಗೆ ಮಗು ಮಾಡಿಕೊಳ್ಳುತ್ತೇನೆ ಅಂತ ಹೆದರಿಸಿದ್ದಾಳೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.

- Advertisement -

Latest News

error: Content is protected !!