- Advertisement -
- Advertisement -
ಬೆಳ್ತಂಗಡಿ : ಕರ್ನಾಟಕ ಸರಕಾರದ ಮಾಜಿ ಸಾರಿಗೆ , ಗೃಹ, ಹಣಕಾಸು ,ಕೈಗಾರಿಕಾ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಚಿವರಾಗಿದ್ದ ಪಿ.ಜಿ.ಆರ್ ಸಿಂಧ್ಯ ಬೆಳ್ತಂಗಡಿ ದಿವಂಗತ ಮಾಜಿ ಶಾಸಕ ಕೆ.ವಸಂತ ಬಂಗೇರ ಮನೆಗೆ ಮೇ.30 ರಂದು (ಇಂದು) ಸಂಜೆ ಭೇಟಿ ಮಾಡಿ ಮನೆಯವರಿಗೆ ಸಾಂತ್ವನ ಹೇಳಿದರು.

ರಾಮಕೃಷ್ಣ ಹೆಗ್ಗಡೆ , ದೇವೆಗೌಡ , ಎಸ್.ಆರ್. ಮೊಮ್ಮಯಿ, ಜೆ.ಹೆಚ್.ಪಾಟೀಲ್ , ಧರಂ ಸಿಂಗ್ ಅವರ ಅವಧಿಯಲ್ಲಿ ಸಚಿವರಾಗಿದ್ದರು.25 ವರ್ಷ ಶಾಸಕರಾಗಿ , 18 ವರ್ಷ ಮಂತ್ರಿಗಳಾಗಿ 1983 ರಿಂದ 2006 ವರೆಗೆ ಕೆಲಸ ಮಾಡಿದ್ದಾರೆ.

ಪ್ರಸಕ್ತ ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಮುಖ್ಯ ಅಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ದಿ.ಮಾಜಿ ಶಾಸಕ ಕೆ.ವಸಂತ ಬಂಗೇರ ಮತ್ತು ಸಿಂಧ್ಯ ಒಡನಾಟ ಉತ್ತಮವಾಗಿದ್ದು. ಜೊತೆಯಲ್ಲಿ ಸಂಯುಕ್ತ ಜನತಾದಳದಲ್ಲಿ ಶಾಸಕರಾಗಿ ಬಿಜೆಪಿ ಶಾಸಕ ದಿ.ಕೆ.ವಸಂತ ಬಂಗೇರರ ಜೊತೆಯಲ್ಲಿಯೇ ವಿಧಾನಸಭೆಗೆ ಪ್ರವೇಶ ಮಾಡಿದ್ದರು
- Advertisement -