Thursday, June 4, 2026
Homeಕರಾವಳಿಬೆಳ್ತಂಗಡಿಯಲ್ಲಿ ಇಂದು 3ನೇ ಕೊರೋನಾ ಪ್ರಕರಣ: ಅಳದಂಗಡಿಯ ವ್ಯಕ್ತಿಗೆ ಸೋಂಕು ದೃಢ

ಬೆಳ್ತಂಗಡಿಯಲ್ಲಿ ಇಂದು 3ನೇ ಕೊರೋನಾ ಪ್ರಕರಣ: ಅಳದಂಗಡಿಯ ವ್ಯಕ್ತಿಗೆ ಸೋಂಕು ದೃಢ

- Advertisement -
- Advertisement -

ಬೆಳ್ತಂಗಡಿ: ಜಿಲ್ಲೆಯ ಇತರ ತಾಲೂಕಿಗೆ ಹೋಲಿಸಿದರೆ ಈವರೆಗೆ ಸ್ವಲ್ಪ ಮಟ್ಟಿಗೆ ಕೊರೋನಾ ರುದ್ರನರ್ತನ ಕಮ್ಮಿ ಇದ್ದ ಬೆಳ್ತಂಗಡಿ ತಾಲೂಕಿನಲ್ಲಿ ಇಂದು ಒಂದೇ ದಿನ ಬರೋಬ್ಬರಿ ಮೂರು ಕೊರೋನಾ ಪ್ರಕರಣ ಪತ್ತೆಯಾಗಿದೆ.

ಅಳದಂಗಡಿ ಸಮೀಪದ ಸುಲ್ಕೇರಿಮೊಗ್ರು ಪರಿಸರದ ವ್ಯಕ್ತಿಗೆ ಕಿಲ್ಲರ್ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

ಇಂದು ಬೆಳಿಗ್ಗೆ ಉಜಿರೆಯ ಪೆಟ್ರೋಲ್ ಪಂಪ್ ನ ಸಿಬ್ಬಂದಿಯೊಬ್ಬರಿಗೆ ಕೊರೋನಾ ದೃಢವಾಗಿತ್ತು. ನಂತರ ಮದ್ದಡ್ಕದ 28 ವರ್ಷದ ಯುವಕನಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿತ್ತು.

ಹಾಗೆಯೆ ಈಗ ಅಳದಂಗಡಿಯ ವ್ಯಕ್ತಿಗೆ ತಗುಲಿರುವ ಮೂಲಕ ಇಂದು ಒಂದೇ ದಿನ ಮೂರು ಕೊರೋನಾ ಪ್ರಕರಣ ತಾಲೂಕಿನಲ್ಲಿ ಕಂಡು ಬಂದಂತಾಗಿದೆ.

- Advertisement -

Latest News

error: Content is protected !!