Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಪರೀಕ್ಷೆ ಬರೆದು ವಿದ್ಯಾರ್ಥಿನಿ ನಾಪತ್ತೆ

ಮಂಗಳೂರು; ಪರೀಕ್ಷೆ ಬರೆದು ವಿದ್ಯಾರ್ಥಿನಿ ನಾಪತ್ತೆ

- Advertisement -
- Advertisement -

ಮಂಗಳೂರು; ಸೆಮಿಸ್ಟರ್ ಪರೀಕ್ಷೆ ಬರೆದು ವಿದ್ಯಾರ್ಥಿನಿ ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೋಶನಿ ನಿಲಯದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜ್ (21) ನಾಪತ್ತೆಯಾದ ವಿದ್ಯಾರ್ಥಿನಿ.

ರೋಶನಿ ನಿಲಯದಲ್ಲಿ ಕ್ರಿಮಿನಾಲಜಿ ಆ್ಯಂಡ್ ಫಾರೆನ್ಸಿಕ್ ಸೈನ್ಸ್ ವಿಷಯದಲ್ಲಿ ಎಂಎಸ್ಸಿ ಮೊದಲನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ದೀಪಿಕಾ ಮೇ 7ರಂದು ರೋಶನಿ ನಿಲಯದಲ್ಲಿ 2ನೆ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಹೊರಗೆ ಬಂದಿದ್ದು ಬಳಿಕ ವಾಪಸ್ ಪರೀಕ್ಷಾ ಹಾಲ್‌ಗೆ ಬಾರದೆ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಕಾಲೇಜಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಕಾಲೇಜಿನಿಂದ ಹೊರಗೆ ಹೋಗಿರುವುದು ಕಂಡು ಬಂದಿದೆ. 5.6 ಅಡಿ ಎತ್ತರದ, ಗೋದಿ ಮೈಬಣ್ಣದ, ದುಂಡು ಮುಖದ, ದಪ್ಪ ಶರೀರದ ಈಕೆ ನಾಪತ್ತೆಯಾದಾಗ ಕಾಲೇಜಿನ ಸಮವಸ್ತ್ರ ಧರಿಸಿ ದ್ದರು. ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್ ಭಾಷೆ ಬಲ್ಲ ಈಕೆಯನ್ನು ಕಂಡವರು 0824-2220800/ 2220518/ 9480805339/ 9480805346ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

- Advertisement -

Latest News

error: Content is protected !!