Saturday, June 13, 2026
Homeಕರಾವಳಿಆಯತಪ್ಪಿ ಬಾವಿಗೆ‌ ಬಿದ್ದ ಮಹಿಳೆ; ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

ಆಯತಪ್ಪಿ ಬಾವಿಗೆ‌ ಬಿದ್ದ ಮಹಿಳೆ; ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

- Advertisement -
- Advertisement -

ಮಂಗಳೂರು: ಮಹಿಳೆಯೊಬ್ಬರು ಮನೆಯ ಬಾವಿಯಿಂದ ನೀರು ಸೇದುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದಿದ್ದು, ಕದ್ರಿ ಅಗ್ನಿಶಾಮಕ ಠಾಣೆಯವರು ಮಹಿಳೆಯನ್ನು ರಕ್ಷಿಸಿದ್ದಾರೆ.

ಸುಮಾರು 58 ವರ್ಷ ವಯಸ್ಸಿನ ಮಹಿಳೆ ಸಂಜೆ ವೇಳೆ ನೀರು ಸೇದುತ್ತಿದ್ದಾಗ ತಲೆ ಸುತ್ತು ಬಂದಂತೆ ಆಗಿ ಬಾವಿಗೆ ಬಿದ್ದರು.

ಮಹಿಳೆಯನ್ನು ಕದ್ರಿಯ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದು, ಬಾವಿಯಲ್ಲಿ ಎಂಟು ಅಡಿಗಳಿಗೂ ಹೆಚ್ಚು ನೀರಿತ್ತು. ಮಹಿಳೆ ಪಂಪ್ ನ ಹಗ್ಗ ಹಿಡಿದುಕೊಂಡು ನಿಂತಿದ್ದರು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ರಾಜೀವ, ಪ್ರಮುಖ ಅಗ್ನಿಶಾಮಕ ಚಂದ್ರಹಾಸ ಸಾಲ್ಯಾನ್, ಅಗ್ನಿಶಾಮಕರಾದ ದಯಾಕರ, ಪುನೀತ್, ಶಿವರಾಜ್, ಪವನ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!