Sunday, May 19, 2024
Homeತಾಜಾ ಸುದ್ದಿಯುಗಾದಿ ಬಳಿಕ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ; ಕೋಡಿಮಠ ಶ್ರೀ ಭವಿಷ್ಯ

ಯುಗಾದಿ ಬಳಿಕ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ; ಕೋಡಿಮಠ ಶ್ರೀ ಭವಿಷ್ಯ

spot_img
- Advertisement -
- Advertisement -

ಬೆಂಗಳೂರು: ಯುಗಾದಿ ಬಳಿಕ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗುತ್ತದೆ ಎಂದು ಕೋಡಿಮಠ ಶ್ರೀ ಭವಿಷ್ಯ ನುಡಿದಿದ್ದಾರೆ.

ಯುಗಾದಿ ನಂತ್ರ ಒಳ್ಳೆಯ ಮಳೆಯಾಗಿ ಬೆಳೆ ಬಂದ್ರೇ, ಧಾರ್ಮಿಕ ಮುಖಂಡನ ಸಾವು ಕೂಡ ಆಗಲಿದೆ ಎಂದಿದ್ದಾರೆ. ಯುಗಾದಿ ಕಳೆದ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದರು.ಇನ್ನು ಇದೇ ವೇಳೆ ರಾಜ್ಯ ರಾಜಕೀಯ ಬಗ್ಗೆ ಯುಗಾದಿ ಕಳೆದ ನಂತರ ಹೇಳುವೆ, ಇನ್ನ ಸಾಕಷ್ಟು ಸಮಯವಿದೆ ಎಂದರು.

ಈ ಕುರಿತಂತೆ ಕೆಲವು ದಿನಗಳ ಹಿಂದೆ ಕೋಲಾರದ ಮಾಲೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದಂತ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿಯವರು, ರಾಜ್ಯದಲ್ಲಿ ಯುಗಾದಿ ಕಳೆದ ನಂತ್ರ, ಒಳ್ಳೆ ಬೆಳೆ, ಮಳೆಯಾಗುವ ಲಕ್ಷಣಗಳಿವೆ ಎಂದಿದ್ದಾರೆ.

ಬೆಂಕಿ ಹಾವಳಿ, ನೀರಿನ ಹಾವಳಿ ಹೆಚ್ಚಾಗುತ್ತೆ, ಯುದ್ದ‌ ಆಗುತ್ತೆ. ಅನೇಕ‌ ಸಾವು ನೋವುಗಳು ಆಗುತ್ತೆ ಎಂದರು. ಜಾಗತಿಕ ಮಟ್ಟದಲ್ಲಿ ಮತಾಂದತೆ ಹೆಚ್ಚಾಗುತ್ತದೆ. ಕೆಲವೊಂದು ಕಡೆ ಬಾಂಬ್ ಸ್ಫೋಟ, ಭೂಕಂಪ ಆಗುತ್ತೆ. ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದಿದ್ದಾರೆ.

ಇದೇ ವೇಳೆಯಲ್ಲಿ ಗ್ಯಾರೆಂಟ್ ಗಳಿಂದ‌ ಸರ್ಕಾರ ನಡೆಯುತ್ತಿದ್ದೀಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ನನ್ನಗಿಂತ ನಿಮಗೆ ಚೆನ್ನಾಗಿ ಗೊತ್ತು. ರಾಷ್ಟ್ರ ರಾಜಕಾರಣ ಸಹ ಯುಗಾದಿ ಮೇಲೆ ಗೊತ್ತಾಗುತ್ತದೆ. ಯುಗಾದಿ ನಂತರ‌ ಭವಿಷ್ಯ ಬರುವುದು. ಒಂದು ತಿಂಗಳು ಕಳೆದ ಮೇಲೆ ಮಳೆ, ಬೇಳೆ, ರಾಜಕೀಯ, ದುಡಿಮೆ, ವ್ಯಾಪಾರ ಎಲ್ಲಾ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!