Wednesday, June 3, 2026
Homeಕರಾವಳಿಕಡಬ; ಎದೆಹಾಲು ಉಣಿಸುವಾಗ ಆಕಸ್ಮಿಕವಾಗಿ ಮೂರು ತಿಂಗಳ ಕಂದಮ್ಮ ಸಾವು; ಮಾನಸಿಕವಾಗಿ ನೊಂದು ತಾಯಿ ಆತ್ಮಹತ್ಯೆ

ಕಡಬ; ಎದೆಹಾಲು ಉಣಿಸುವಾಗ ಆಕಸ್ಮಿಕವಾಗಿ ಮೂರು ತಿಂಗಳ ಕಂದಮ್ಮ ಸಾವು; ಮಾನಸಿಕವಾಗಿ ನೊಂದು ತಾಯಿ ಆತ್ಮಹತ್ಯೆ

- Advertisement -
- Advertisement -

ಕಡಬ; ಎದೆಹಾಲು ಉಣಿಸುವಾಗ ಆಕಸ್ಮಿಕವಾಗಿ ಮೂರು ತಿಂಗಳ ಕಂದಮ್ಮ ಸಾವನ್ನಪ್ಪಿದ್ದರಿಂದ  ಮಾನಸಿಕವಾಗಿ ನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜದಲ್ಲಿ ನಡೆದಿದೆ.ರಾಮಕುಂಜ ಗ್ರಾಮದ ಶ್ರೀಮತಿ ವನಿತಾ (38) ಆತ್ಮಹತ್ಯೆ ಮಾಡಿಕೊಂಡವರು.

ವನಿತಾ ಅವರಿಗೆ ಮೂರು ವರ್ಷದ ಗಂಡು ಮಗು ಇದ್ದು, ಮೂರು ತಿಂಗಳ ಹಿಂದೆ   2ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಎದೆ ಹಾಲು ಉಣಿಸುವ ಸಮಯದಲ್ಲಿ ಹೆಣ್ಣು ಮಗುವು ಆಕಸ್ಮಿಕವಾಗಿ ಮೃತಪಟ್ಟಿತ್ತು ಎನ್ನಲಾಗಿದೆ. ಇದರಿಂ ಮಾನಸಿಕವಾಗಿ ನೊಂದು ಖಿನ್ನತೆಗೊಳಗಾಗಿದ್ದರು. ಇವರಿಗೆ  ಚಿಕಿತ್ಸೆ ಕೊಡಿಸುವ ಸಲುವಾಗಿ ಪತಿ  ತಾಯಿ ಮನೆಯಾದ ರಾಮಕುಂಜದಲ್ಲಿ ಬಿಟ್ಟು ಹೋಗಿದ್ದರು. ಎ.2ರಂದು  ಮನೆ ಮಂದಿ ಹೊರಗೆ ಹೋಗಿದ್ದ ವೇಳೆ  ಮನೆಯ ಒಳಗಿನ ಕೋಣೆಯ ಮರದ ಅಡ್ಡಕ್ಕೆ ಸೀರೆಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮೃತರ ತಮ್ಮ  ದಿವಾಕರ ಕೆ  ಎಂಬವರು ನೀಡಿದ  ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ ನಂಬ್ರ  11/2024 ಕಲಂ:174 (3)&(i)  ಸಿ ಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!