Thursday, June 4, 2026
Homeಕರಾವಳಿಜೆಡಿಎಸ್‌ನಲ್ಲಿದ್ದು ಬಿಜೆಪಿಗೆ ಬೆಂಬಲ; ಕಾಂಗ್ರೆಸ್‌ ಯಾರಪ್ಪನ ಆಸ್ತಿಯಲ್ಲ!: ಮೊದಿನ್‌ ಬಾವಾ

ಜೆಡಿಎಸ್‌ನಲ್ಲಿದ್ದು ಬಿಜೆಪಿಗೆ ಬೆಂಬಲ; ಕಾಂಗ್ರೆಸ್‌ ಯಾರಪ್ಪನ ಆಸ್ತಿಯಲ್ಲ!: ಮೊದಿನ್‌ ಬಾವಾ

- Advertisement -
- Advertisement -

ಮಂಗಳೂರು: ಜೆಡಿಎಸ್ ಪಕ್ಷಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೇರಿದ್ದೆ. ಸದ್ಯಕ್ಕೆ ಅದೇ ಪಕ್ಷದಲ್ಲಿದ್ದು ಬಿಜೆಪಿಯನ್ನ ಬೆಂಬಲಿಸುತ್ತೇನೆ. ಆದರೆ ಬಿಜೆಪಿಯ ಸಿದ್ಧಾಂತಗಳೆಲ್ಲವನ್ನು ಒಪ್ಪಲಾರೆ ಎಂದು ಮಾಜಿ ಶಾಸಕ ಮೊದಿನ್‌ ಬಾವಾ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಮೊದಿನ್‌ ಬಾವಾ, ‘ನಾನು ಬಿಜೆಪಿಯನ್ನು ಜೆಡಿಎಸ್‌ನಲ್ಲೇ ಇದ್ದು ಬೆಂಬಲಿಸುವೆ. ಆದರೆ ಸಿಎಎ, ಹಿಜಾಬ್‌, ಆಝಾನ್‌ಗೆ ವಿರೋಧಿಸುವ ಬಿಜೆಪಿಯ ಸಿದ್ಧಾಂತಗಳನ್ನು ಒಪ್ಪಲಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಲ್ಲಡ್ಕ ಶಾಲೆಗೆ ಭೇಟಿ ನೀಡಿದಾಗ ನಾನು ವಿರೋಧಿಸಿದ್ದೆ. ನಮ್ಮ ನಾಯಕರು ತಪ್ಪು ಮಾಡಿದರೆ ಅದನ್ನೂ ಪ್ರಶ್ನಿಸುವೆ ಹಾಗೂ ಖಂಡಿಸುವೆ,’ ಎಂದು ಹೇಳಿದರು.

ಕಾಂಗ್ರೆಸ್‌ ಯಾರಪ್ಪನ ಆಸ್ತಿಯಲ್ಲ!; ಪತ್ರಕರ್ತರು ಕೇಳಿದ ಮರಳಿ ಕಾಂಗ್ರೆಸ್‌ ಸೇರುತ್ತೀರಾ ಪ್ರಶ್ನೆಗೆ, ‘ನನ್ನ ಕ್ಷೇತ್ರದ ನಾಯಕರು ಕಾಂಗ್ರೆಸ್‌ ಸೇರ್ಪಡೆಗೆ ವಿರೋಧಿಸಿದ್ದಾರೆ ಎಂದು ಕೇಳಿದ್ದೇನೆ. ಕಾಂಗ್ರೆಸ್‌ ನಾಯಕರು ಗೌರವಯುತವಾಗಿ ಕರೆದಲ್ಲಿ ವಾಪಸಾಗುವೆ. ಕಾಂಗ್ರೆಸ್‌ ಯಾರಪ್ಪನ ಆಸ್ತಿಯೂ ಅಲ್ಲ. ನಾನು ಸೇರ್ಪಡೆಯಾಗುವುದಿ ದ್ದರೆ ಯಾರಿಂದಲೂ ತಡೆಯಲೂ ಆಗದು. ಈ ಬಾರಿ ಬೆಂಬಲಿಗರ ಸಲಹೆಯಂತೆ ಮುಂದುವರಿಯಲಿದ್ದೇನೆ,’ ಎಂದು ತಿಳಿಸಿದರು.

- Advertisement -

Latest News

error: Content is protected !!