Thursday, June 4, 2026
Homeಕರಾವಳಿಚಿರತೆ ದಾಳಿಯಿಂದ ಬಾಲಕನಿಗೆ ಗಾಯ

ಚಿರತೆ ದಾಳಿಯಿಂದ ಬಾಲಕನಿಗೆ ಗಾಯ

- Advertisement -
- Advertisement -

ಕಿನ್ನಿಗೋಳಿ: ಇಲ್ಲಿನ ದಾಮಸ್‌ಕಟ್ಟೆಯ ತುಡಾಮ್ ರಸ್ತೆಯಲ್ಲಿ ರಾತ್ರಿಯ ಹೊತ್ತಿಗೆ ಬಾಲಕನೋರ್ವ ಸೈಕಲ್‌ನಲ್ಲಿ ಹೋಗುತ್ತಿರುವ ಸಂದರ್ಭ ಚಿರತೆ ದಾಳಿ ನಡೆಸಿದ ಘಟನೆ ಸಂಭವಿಸಿದೆ.

ಬಾಲಕನು ಮನೆಯಿಂದ ಸ್ವಲ್ಪ ದೂರದಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದ ವೇಳೆ ಪಕ್ಕದ ಕಾಂಪೌಂಡಿನಿಂದ ಚಿರತೆ ಹೊರಗೆ ಬಂದು ದಾಳಿ ನಡೆಸಲು ಮುಂದಾಯಿತು. ತತ್‌ಕ್ಷಣ ಬಾಲಕ ವೇಗವಾಗಿ ಹೋಗಲು ಯತ್ನಿಸಿದಾಗ ಕೆಳಗ್ಗೆ ಬಿದ್ದ. ಈ ವೇಳೆ ಚಿರತೆ ಅಲ್ಲಿಂದ ಓಡಿ ಹೋಯಿತು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!