Thursday, June 4, 2026
Homeಕರಾವಳಿಸುಬ್ರಮಣ್ಯ : ಆಟೋ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಲೋ ಬಿಪಿಯಾಗಿ ನಿಯಂತ್ರಣ ತಪ್ಪಿದ ಆಟೋ; ರಿಕ್ಷಾ ಪಲ್ಟಿಯಾಗಿ...

ಸುಬ್ರಮಣ್ಯ : ಆಟೋ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಲೋ ಬಿಪಿಯಾಗಿ ನಿಯಂತ್ರಣ ತಪ್ಪಿದ ಆಟೋ; ರಿಕ್ಷಾ ಪಲ್ಟಿಯಾಗಿ ಆಟೋ ಚಾಲಕ ಸಾವು

- Advertisement -
- Advertisement -

ಸುಬ್ರಮಣ್ಯ : ಆಟೋ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಲೋ ಬಿಪಿಯಾಗಿ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ  ಸುಬ್ರಹ್ಮಣ್ಯ ಸಮೀಪದ ಇಂಜಾಡಿ ಬಳಿ ಭಾನುವಾರ ರಾತ್ರಿ ನಡೆದಿದೆ.ವಿವೇಕಾನಂದ ದೇವರಗದ್ದೆ ಮೃತ ಆಟೋ ಚಾಲಕ.

 ಭಾನುವಾರ ರಾತ್ರಿ 9 ರ ಸುಮಾರಿಗೆ ಈ ಘಟನೆ ನಡೆದಿದ್ದು  ಇಂಜಾಡಿ ಬಳಿ ಹೋಗುತ್ತಿರುವಾಗ ವಿವೇಕಾನಂದ ಅವರಿಗೆ ಬಿ.ಪಿ. ಲೋ ಆದ ಪರಿಣಾಮ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡರೆನ್ನಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆ ಸಾಗಿಸುವ ಪ್ರಯತ್ನ ಮಾಡಲಾಯಿತಾದ್ರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!