Friday, June 5, 2026
Homeಕರಾವಳಿಆಟೋ ರಿಕ್ಷಾಕ್ಕೆ ಕಾಡುಕೋಣ ಡಿಕ್ಕಿ; ಆಟೋ ರಿಕ್ಷಾ ಪಲ್ಟಿಯಾಗಿ ಬಾಲಕನಿಗೆ ಗಾಯ

ಆಟೋ ರಿಕ್ಷಾಕ್ಕೆ ಕಾಡುಕೋಣ ಡಿಕ್ಕಿ; ಆಟೋ ರಿಕ್ಷಾ ಪಲ್ಟಿಯಾಗಿ ಬಾಲಕನಿಗೆ ಗಾಯ

- Advertisement -
- Advertisement -

ಬೆಳ್ತಂಗಡಿ : ಚಲಿಸುತ್ತಿದ್ದ ಆಟೋ ರಿಕ್ಷಾಕ್ಕೆ ಕಾಡುಕೋಣ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಬಾಲಕನಿಗೆ ಗಾಯವಾಗಿರುವ ಘಟನೆ ಪುದುವೆಟ್ಟಿನಲ್ಲಿ ನಡೆದಿದೆ.

ಧರ್ಮಸ್ಥಳ-ಮುಂಡಾಜೆ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯ ಪುದುವೆಟ್ಟು ಗ್ರಾಮದ ದಡಪಿತ್ತಿಲು ಎಂಬಲ್ಲಿ ಮಾರ್ಚ್ 2 ರಂದು ರಾತ್ರಿ ಸುಮಾರು ಗಂಟೆ 8:30 ಗಂಟೆಗೆ ಧರ್ಮಸ್ಥಳದಿಂದ ಬೊಳ್ಮನಾರು ಕಡೆ ಹೋಗುತ್ತಿದ್ದ ಆಟೋ ರಿಕ್ಷಾ ಚಾಲಕರಾದ
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ವಡೆಕ್ಕೆಲ್,ಬೊಳ್ಮನಾರು ನಿವಾಸಿ ಡೆನ್ನಿಸ್ (42) ಮತ್ತು ಮಗ ದಿಲ್ಸನ್(15) ಎಂಬವರು ಹೋಗುವಾಗ ಆಟೋ ರಿಕ್ಷಾದ ಮೇಲೆ ಕಾಡುಕೋಣವೊಂದು ದಾಳಿ ಮಾಡಿ ಪಲ್ಟಿ ಮಾಡಿ ಜಖಂ ಮಾಡಿದೆ.

ಈ ಘಟನೆ ವೇಳೆ ಆಟೋದಲ್ಲಿದ್ದ ದಿಲ್ಸನ್(15) ಎಂಬುವರಿಗೆ ತಲೆಗೆ ಗಾಯವಾಗಿದ್ದು ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಉಜಿರೆ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು .ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!