Friday, June 5, 2026
Homeಕ್ರೀಡೆಸತತ 47 ಪಂದ್ಯಗಳ ಪ್ರಜ್ಞಾನಂದ ಜಯದ ಓಟಕ್ಕೆ ತೆರೆ

ಸತತ 47 ಪಂದ್ಯಗಳ ಪ್ರಜ್ಞಾನಂದ ಜಯದ ಓಟಕ್ಕೆ ತೆರೆ

- Advertisement -
- Advertisement -

ಪ್ರೇಗ್: ಭಾರತದ ಗ್ಯಾನ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಪ್ರೇಗ್ ಮಾಸ್ಟರ್ ಚೆಸ್ ಕೂಟದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸೋಲನ್ನು ಕಂಡಿದ್ದಾರೆ.

ಪ್ರಜ್ಞಾನಂದ ಅವರು ಇರಾನ್‌ನ ಪರ್ಹಮ್ ಮಫ್ ಸೂಡ್ಲು ಅವರ ಕೈಯಲ್ಲಿ ಅನಿರೀಕ್ಷಿತವಾಗಿ ಸೋಲನ್ನು ಕಂಡಿದ್ದಾರೆ. ಇದರಿಂದಾಗಿ ಕ್ಲಾಸಿಕಲ್ ಚೆಸ್‌ನಲ್ಲಿ ಅವರ ಸತತ 47 ಪಂದ್ಯಗಳ ಅಜೇಯ ಗೆಲುವಿನ ಓಟ ಅಂತ್ಯಗೊಂಡಿತು. ಇನ್ನೊಂದು ಪಂದ್ಯದಲ್ಲಿ ಡಿ.ಗುಕೇಶ್ ಅವರು ಕಪ್ಪುಕಾಯಿನ್ ಗಳೊಂದಿಗೆ ಆಡಿ ಉತ್ತಮ ನಿರ್ವಹಣೆ ನೀಡಿ, ಚೆಕ್ ಗಣರಾಜ್ಯದ ಗುಯೆನ್ ಥಾಯ್ ಡೈ ವಾನ್‌ರನ್ನು ಸೋಲಿಸಿದರು.

ಇನ್ನೂ ಏಳು ಸುತ್ತುಗಳ ಆಟ ಬಾಕಿ ಉಳಿದಿದ್ದು, ಇರಾನಿನ ಮಫ್ ಸೂಡ್ಲು ಎರಡು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

- Advertisement -

Latest News

error: Content is protected !!