Saturday, June 6, 2026
Homeತಾಜಾ ಸುದ್ದಿ7 ಮಂದಿಯ ಮೇಲೆ ಆಕ್ರಮಣಕಾರಿ ದಾಳಿ ನಡೆಸಿದ್ದ ಬೀದಿ ನಾಯಿ ರೇಬೀಸ್ ನಿಂದ ಸಾವು

7 ಮಂದಿಯ ಮೇಲೆ ಆಕ್ರಮಣಕಾರಿ ದಾಳಿ ನಡೆಸಿದ್ದ ಬೀದಿ ನಾಯಿ ರೇಬೀಸ್ ನಿಂದ ಸಾವು

- Advertisement -
- Advertisement -

ಕೋಯಿಕ್ಕೋಡ್(ಕೇರಳ): ಶಾಲಾ ವಿದ್ಯಾರ್ಥಿ ಸೇರಿದಂತೆ ಏಳು ಮಂದಿಯ ಮೇಲೆ ಕೋಯಿಕ್ಕೋಡ್ ನ ಕೂಡರಂಜಿ ಪೇಟೆಯಲ್ಲಿ ಮಂಗಳವಾರದಂದು ಬೆಳಗ್ಗೆ ಆಕ್ರಮಣಕಾರಿ ದಾಳಿ ನಡೆಸಿದ್ದ ಬೀದಿ ನಾಯಿ ರೇಬೀಸ್ ನಿಂದ ಸಾವನ್ನಪ್ಪಿರುವುದು ಧೃಢಪಟ್ಟಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಶ್ವಾನ ಸತ್ತ ಬಳಿಕ ಮರಣೋತ್ತರ ಪರೀಕ್ಷೆ ನಿಂದ ನಿಗಾವಹಿಸಿ ನಡೆಸಲಾಗಿದ್ದು ರೇಬೀಸ್ ಸಾವನ್ನಪ್ಪಿರುವುದು ಖಚಿತವಾಗಿದೆ ಎಂದು ಹಿರಿಯ ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಕಡಿತಕ್ಕೊಳಗಾದವರನ್ನು ಸರಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಮತ್ತು ಲಸಿಕೆಗಳನ್ನು ನೀಡುತ್ತಿದೆ. ಗಾಯಾಳುಗಳಿಗೆ ತಲಾ 10 ಸಾವಿರ ರೂ ಪರಿಹಾರ ಧನವನ್ನೂ ನೀಡಲಾಗುತ್ತಿದೆ. ಸತ್ತಿರುವ ಶ್ವಾನ ಬೇರೆ ಯಾವುದೇ ಸಾಕು ಪ್ರಾಣಿಗಳಿಗೆ ಕಚ್ಚಿಲ್ಲ ಎಂದು ಹೇಳಲಾಗಿದೆಯಾದರೂ ನಿಗಾ ವಹಿಸಲಾಗಿದೆ. ನಾಯಿ ದಾಳಿಗೊಳಗಾದವರ ಪೈಕಿ ಬಾಲಕನಿಗೆ ಹೆಚ್ಚಿನ ಪ್ರಮಾಣದ ಗಾಯವಾಗಿದೆ. ಮಹಿಳೆ ಮತ್ತು ಇತರ ಐವರು ಪುರುಷರಾಗಿದ್ದಾರೆ.

- Advertisement -

Latest News

error: Content is protected !!