Saturday, June 6, 2026
Homeಪ್ರಮುಖ-ಸುದ್ದಿನಿವೃತ್ತ ಐಎಎಸ್‌ ಅಧಿಕಾರಿ, ಬಿಜೆಪಿ ಮುಖಂಡ, ನಟ ಕೆ. ಶಿವರಾಂ ಅವರಿಗೆ ಹೃದಯಾಘಾತ

ನಿವೃತ್ತ ಐಎಎಸ್‌ ಅಧಿಕಾರಿ, ಬಿಜೆಪಿ ಮುಖಂಡ, ನಟ ಕೆ. ಶಿವರಾಂ ಅವರಿಗೆ ಹೃದಯಾಘಾತ

- Advertisement -
- Advertisement -

ಬೆಂಗಳೂರು: ನಿವೃತ್ತ ಐಎಎಸ್‌ ಅಧಿಕಾರಿ, ಬಿಜೆಪಿ ಮುಖಂಡ ಹಾಗೂ ನಟ ಕೆ. ಶಿವರಾಂ ಅವರು ಹೃದಯಾಘಾತದಿಂದ ಬುಧವಾರದಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಕೆ. ಶಿವರಾಂ ಅವರಿಗೆ 71 ವರ್ಷ ವಯಸ್ಸಾಗಿದ್ದು ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನೆಯ ಮೂಲಕ ಮನೆಮಾತಾಗಿದ್ದರು. ಅವರು ‘ಬಾ ನಲ್ಲೆ ಮಧುಚಂದ್ರಕೆ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ರಾಮನಗರ ಮೂಲದ ಅವರು ಚಲವಾದಿ ಮಹಾಸಭಾದ ಮುಖಂಡರೂ ಹೌದು. ಕಳೆದ ಏಳು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.

- Advertisement -

Latest News

error: Content is protected !!