Friday, June 5, 2026
Homeಕರಾವಳಿಮಂಗಳೂರು: ಐಸ್ ಕ್ರೀಂ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ನೇಣಿಗೆ ಶರಣು

ಮಂಗಳೂರು: ಐಸ್ ಕ್ರೀಂ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ನೇಣಿಗೆ ಶರಣು

- Advertisement -
- Advertisement -

ಮಂಗಳೂರು: ಐಸ್ ಕ್ರೀಂ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ನೇಣಿಗೆ ಶರಣಾಗಿರುವ ಘಟನೆ ಮಂಗಳೂರಿನ ಪಿಲಾರ್ ನ ಗೋಡೌನ್ ನಲ್ಲಿ ನಡೆದಿದೆ.ಕೊಡಗು ಜಿಲ್ಲೆ ಸೋಮವಾರಪೇಟೆಯ ಬೆಳ್ಳಾರೆ ಹಳ್ಳಿ ನಿವಾಸಿ ಯೋಗೇಶ್ (31) ಮೃತ ಯುವಕ.

ಯೋಗೇಶ್ ಕಳೆದ ಏಳು ವರುಷದಿಂದ ತೊಕ್ಕೊಟ್ಟುವಿನ ರಾಯನ್ಸ್ ಕ್ರೀಮ್ ಪಾರ್ಲರಲ್ಲಿ ಕೆಲಸಕ್ಕಿದ್ದ. ಅವಿವಾಹಿತನಾಗಿದ್ದ  ಯೋಗೇಶ್ ಎಲ್ಲರಿಗೂ ಪರಿಚಿತನಾಗಿದ್ದ. ಪಿಲಾರಿನ ಗೋಡೌನಲ್ಲೇ ಯೋಗೇಶ್ ಸ್ನೇಹಿತರೊಂದಿಗೆ ವಾಸವಿದ್ದ. ಬೆಳಿಗ್ಗೆ ಸ್ಥಳೀಯ ಯುವಕರು ಶಟಲ್ ಆಡುತ್ತಿದ್ದಾಗ ಕಿಟಕಿ ತೆರೆದು ಯೋಗೇಶ್ ನೋಡಿದ್ದರು. ಯುವಕರು ತೆರಳಿದ ಬಳಿಕ ಯೋಗೇಶ್ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!