Wednesday, June 3, 2026
Homeಅಪರಾಧತೊಕ್ಕೊಟ್ಟುವಿನಲ್ಲಿ ಸರಣಿ ಅಪಘಾತ; ನಜ್ಜುಗುಜ್ಜಾದ ಕಾರು; ಪವಾಡ ಸದೃಶ್ಯವಾಗಿ ಪ್ರಯಾಣಿಕರು ಪಾರು

ತೊಕ್ಕೊಟ್ಟುವಿನಲ್ಲಿ ಸರಣಿ ಅಪಘಾತ; ನಜ್ಜುಗುಜ್ಜಾದ ಕಾರು; ಪವಾಡ ಸದೃಶ್ಯವಾಗಿ ಪ್ರಯಾಣಿಕರು ಪಾರು

- Advertisement -
- Advertisement -

ಉಳ್ಳಾಲ: ತೊಕ್ಕೊಟ್ಟುವಿನಲ್ಲಿ ಪಿಕಪ್ ವಾಹನ ಚಾಲಕ ಏಕಾಏಕಿಯಾಗಿ ಬ್ರೇಕ್ ಹಾಕಿದ ಪರಿಣಾಮ ವಾಹನಗಳ ಮಧ್ಯೆ ಸರಣಿ ಅಪಘಾತ ನಡೆದ ಪರಿಣಾಮವಾಗಿ ಕಾರು ಅಪ್ಪಚ್ಚಿಯಾಗಿದ್ದು, ಪವಾಡ ಸದೃಶ್ಯವಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ.

ಪಿಕಪ್ ವಾಹನ ಚಾಲಕನು ತೊಕ್ಕೊಟ್ಟು ಜಂಕ್ಷನ್ ಬಳಿಯಲ್ಲಿ ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ್ದು, ಅದೇ ವೇಳೆಗೆ ವೇಗದಲ್ಲಿ ಹಿಂಬದಿಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು, ಪಿಕಪ್ ವಾಹನದ ಹಿಂಬಾಗಕ್ಕೆ ಗುದ್ದಿದೆ. ಯುವತಿ ಸ್ವಿಫ್ಟ್ ಕಾರು ಚಲಾಯಿಸುತ್ತಿದ್ದು, ಘಟನೆಯ ಕುರಿತು ಆಲೋಚನೆ ಮಾಡುವಷ್ಟರಲ್ಲೇ ಹಿಂಬದಿಯಿಂದ ಬಂದ ಗೂಡ್ಸ್‌ ಲಾರಿಯೊಂದು ಸ್ವಿಫ್ಟ್ ಕಾರಿನ ಹಿಂಬಾಗಕ್ಕೆ ಗುದ್ದಿದೆ.

ಇನ್ನು ಈ ಸರಣಿ ಅಪಘಾತದಿಂದ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಕಾರಿನಲ್ಲಿದ್ದ ಯವತಿಯರು ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ ಎಂದು ತಿಳಿಸು ಬಂದಿದೆ.

ಈ ಘಟನೆಯಿಂದ ಕೆಲ ಕಾಲ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ವಾಹನ ಸಂಚಾರ ಅಸ್ಥವ್ಯಸ್ಥಗೊಂಡಿದ್ದು, ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಪೊಲೀಸರು ಆಗಮಿಸಿ ರಸ್ತೆ ಸಂಚಾರ ಸುಗಮಗೊಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!