Sunday, June 7, 2026
Homeಕರಾವಳಿಉಡುಪಿಉಡುಪಿ: ಪುತ್ತಿಗೆ ಶ್ರೀ ಪರ್ಯಾಯದಿಂದ ಈ ಬಾರಿಯೂ ಪೇಜಾವರ ಮಠ ಸೇರಿದಂತೆ 6 ಮಠಗಳು ದೂರ?

ಉಡುಪಿ: ಪುತ್ತಿಗೆ ಶ್ರೀ ಪರ್ಯಾಯದಿಂದ ಈ ಬಾರಿಯೂ ಪೇಜಾವರ ಮಠ ಸೇರಿದಂತೆ 6 ಮಠಗಳು ದೂರ?

- Advertisement -
- Advertisement -

ಉಡುಪಿ: ಜನವರಿ 17 ಮತ್ತು 18 ರಂದು ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಪರ್ಯಾಯೋತ್ಸವದಿಂದ
ಪೇಜಾವರ ಶ್ರೀ ಸೇರಿದಂತೆ ಇತರ ಮಠಾಧೀಶರು ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ.

ರಾಮಜನ್ಮಭೂಮಿ ಟ್ರಸ್ಟ್ ನ‌ ಟ್ರಸ್ಟಿ ಆಗಿರುವ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಜನವರಿ 15 ರಂದು ಉಡುಪಿಯಿಂದ ಅಯೋಧ್ಯೆಗೆ ತೆರಳಲಿದ್ದಾರೆ.

ಜನವರಿ 17 ಮತ್ತು 18 ರಂದು ನಡೆಯಲಿರುವ ಉಡುಪಿ ಪರ್ಯಾಯ ನಡೆಯಲಿದ್ದು, 2008 ರಲ್ಲಿಯೂ ಪುತ್ತಿಗೆ ಶ್ರೀಗಳ ಪರ್ಯಾಯದಲ್ಲಿ ಪೇಜಾವರ ಮಠ ಅಂತರ ಕಾಯ್ದುಕೊಂಡಿತ್ತು.

2008 ರಲ್ಲಿ ಅಷ್ಟಮಠಗಳ ಪೈಕಿ ಪರ್ಯಾಯದಿಂದ 6 ಮಠಗಳ ಶ್ರೀಗಳು ಅಂತರ ಕಾಯ್ದುಕೊಂಡಿದ್ದರೆ, ಶೀರೂರು ಮಠದ ಸ್ವಾಮೀಜಿ ಮಾತ್ರ ಪುತ್ತಿಗೆ ಶ್ರೀಗಳ ಜೊತೆ ನಿಂತಿದ್ದರು.

ಪುತ್ತಿಗೆ ಶ್ರೀಗಳು ಸಮುದ್ರೋಲ್ಲಂಘನ ಮಾಡಿರುವ ಕಾರಣದಿಂದಾಗಿ ಹುಟ್ಟಿಕೊಂಡಿರುವ ಅಸಮಾಧಾನ ಈ ಬಾರಿಯ ಪರ್ಯಾಯೋತ್ಸವದಲ್ಲಿಯೂ ಮುಂದುವರಿಯುವುದು ನಿಶ್ಚಿತವಾಗಿದೆ.

- Advertisement -

Latest News

error: Content is protected !!