Friday, June 5, 2026
Homeಕರಾವಳಿಕಡಬ; 6 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಗುಡ್ಡದಲ್ಲಿ ಪತ್ತೆ

ಕಡಬ; 6 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಗುಡ್ಡದಲ್ಲಿ ಪತ್ತೆ

- Advertisement -
- Advertisement -

ಕಡಬ; 6 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಗುಡ್ಡದಲ್ಲಿ ಪತ್ತೆಯಾಗ ಘಟನೆ ಕಡಬ ತಾಲೂಕಿನ ಎಡಮಂಗಲದ ಕಾರಂಜಿಗುಡ್ಡಲ್ಲಿ ನಡೆದಿದೆ.

ಆರು ತಿಂಗಳ ಹಿಂದೆ ಇಲ್ಲಿನ ಬಾಲಕೃಷ್ಣ ಗೌಡ ಎಂಬವರು ನಾಪತ್ತೆಯಾಗಿದ್ದರು. ನಿನ್ನೆ ಸ್ಥಳೀಯರು ಸೊಪ್ಪು ತರಲು ಗುಡ್ಡೆಗೆ ಹೋಗಿದ್ದಾಗ ಮನುಷ್ಯನ ಅಸ್ತಿ ಪಂಜರ ಕಂಡಿದೆ. ವಿಷಯ ತಿಳಿದ ಪಾದೆ ಮನೆ ಬಾಲಕೃಷ್ಣ ಗೌಡರ ಮನೆಯವರು ಸ್ಥಳಕ್ಕೆ ಹೋಗಿ ನೋಡಿ ಬೆಳ್ಳಾರೆ ಪೋಲೀಸ್ ಇಲಾಖೆಗೆ ತಿಳಿಸಿದ್ದಾರೆ.

ಈ ಬಗ್ಗೆ ಮೃತರ ಪುತ್ರ ಯತೀಶ್ ಎಂಬವರು ಪೊಲೀಸರಿಗೆ ಮಾಹಿತಿ ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರದಿಂದ ಮರ ಕೆಸು ಸಂಗ್ರಹಿಸುವಾಗ ಮರದಿಂದ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

- Advertisement -

Latest News

error: Content is protected !!