Thursday, June 4, 2026
Homeಕರಾವಳಿಉಡುಪಿಉಡುಪಿ; ಮೀನುಗಾರಿಕಾ ದೋಣಿ ಮಗುಚಿ ಇಬ್ಬರು ಮೀನುಗಾರರ ಸಾವು

ಉಡುಪಿ; ಮೀನುಗಾರಿಕಾ ದೋಣಿ ಮಗುಚಿ ಇಬ್ಬರು ಮೀನುಗಾರರ ಸಾವು

- Advertisement -
- Advertisement -

ಉಡುಪಿ: ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ದೋಣಿ ಮಗುಚಿ ಬಿದ್ದು ಇಬ್ಬರು ಮೀನುಗಾರರು ಮೃತಪಟ್ಟ ಘಟನೆ ಶಿರೂರು ಸಮೀಪ ನಡೆದಿದೆ.

ಬೈಂದೂರು ತಾಲೂಕಿನ ಶಿರೂರಿನ ಕಳುವಿತ್ಲುವಿನಲ್ಲಿ ಈ ದುರ್ಘಟನೆ ನಡೆದಿದ್ದು. ಭಾನುವಾರ ರಾತ್ರಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೂವರು ಮಧ್ಯರಾತ್ರಿ 1.30 ರ ಸಮಯದಲ್ಲಿ ವಾಪಾಸಾಗುತ್ತಿದ್ದಾಗ ಕಳುಹಿತ್ಲು ಅಳಿವೆ ಸಮೀಪ ಅರಬ್ಬಿ ಸಮುದ್ರದಲ್ಲಿ ದೋಣಿ ಮಗುಚಿ ಬಿದ್ದಿದೆ.

ಹಡವಿನಕೋಣೆಯ ಅಬ್ದುಲ್ ಸತ್ತಾರ್(45) ಮತ್ತು ಭಟ್ಕಳದ ಮಿಸ್ಬಾ ಯೂಸುಫ್(48) ಮೃತಪಟ್ಟಿದ್ದು, ದೋಣಿಯಲ್ಲಿದ್ದ ಹಡವಿನಕೋಣೆಯ ಬುಡ್ಡು ಮುಖ್ತಾರ್(37) ಎಂಬವರನ್ನು ಮತ್ತೊಂದು ದೋಣಿಯಲ್ಲಿದ್ದವರು ರಕ್ಷಿಸಿದ್ದಾರೆ.

ಕರಾವಳಿ ಕಾವಲು ಪಡೆ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಭಾಗದಲ್ಲಿ ಕೆಲವು ತಿಂಗಳುಗಳ ಹಿಂದೆ ಕೂಡಾ ಇಬ್ಬರು ಮೀನುಗಾರರು ಮೃತಪಟ್ಟಿದ್ದರು.

- Advertisement -

Latest News

error: Content is protected !!