Thursday, June 4, 2026
Homeಕರಾವಳಿಮಂಗಳೂರು; ಉಳ್ಳಾಲದಲ್ಲಿ ಮಾರಾಕಾಸ್ತ್ರದಿಂದ ಇರಿದು ಯುವಕನ ಕೊಲೆ

ಮಂಗಳೂರು; ಉಳ್ಳಾಲದಲ್ಲಿ ಮಾರಾಕಾಸ್ತ್ರದಿಂದ ಇರಿದು ಯುವಕನ ಕೊಲೆ

- Advertisement -
- Advertisement -

ಮಂಗಳೂರು; ಮಾರಾಕಾಸ್ತ್ರದಿಂದ ಇರಿದು ಯುವಕನ ಕೊಲೆ ಮಾಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿಯ ಜಾಯ್‌ಲ್ಯಾಂಡ್‌ ಶಾಲೆ ಬಳಿ ನಡೆದಿದೆ.

ಶಾಲೆ ಎದುರು ಬಿಯರ್‌ ಕುಡಿದು ಬಾಟಲಿಯನ್ನು ರಸ್ತೆಗೆ ಎಸೆದವರನ್ನು ಪ್ರಶ್ನೆ ಮಾಡಿದ್ದೇ ಯುವಕನ ಕೊಲೆಗೆ ಕಾರಣ ಎನ್ನಲಾಗಿದೆ. ವರುಣ್‌ ಗಟ್ಟಿ (28) ಕೊಲೆಯಾದ ಯುವಕ. ಬುಧವಾರ ರಾತ್ರಿ 10.45ರ ವೇಳೆ ಜಾಯ್‌ ಲ್ಯಾಂಡ್‌ ಆಂಗ್ಲ ಮಾಧ್ಯಮ ಶಾಲೆಯ ಎದುರುಗಡೆ ಕಟ್ಟೆಯಲ್ಲಿ ಆರೋಪಿಗಳಾದ ಸೂರಜ್‌ ಮತ್ತು ರವಿರಾಜ್‌ ಎಂಬುವವರು ಬಿಯರ್‌ ಕುಡಿದು ಬಾಟಲಿಯನ್ನು ರಸ್ತೆಗೆ ಎಸೆದಿದ್ದರೆನ್ನಲಾಗಿದೆ. ಇದನ್ನು ಪ್ರಶ್ನೆ ಮಾಡಿದ ವರುಣ್‌ ಮತ್ತು ಸೂರಜ್‌ ಅವರ ಮಧ್ಯೆ ವಾಗ್ವಾದ ನಡೆದಿದೆ. ವಾಗ್ವಾದ ನಂತರ ಗಲಾಟೆಗೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ಸೂರಜ್‌ ವರುಣ್‌ ಬೆನ್ನಿಗೆ ಹರಿತವಾದ ಆಯುಧದಿಂದ ಇರಿದಿದ್ದಾನೆ.

ಗಂಭೀರವಾಗಿ ಗಾಯಗೊಂಡ ವರುಣ್‌ ಸಮೀಪವೇ ಇದ್ದ ತನ್ನ ಮನೆಗೆ ನಡೆದುಕೊಂಡು ಹೋಗಿದ್ದು, ಇದನ್ನು ಕಂಡ ಸಹೋದರ ಶರಣ್‌ ಮತ್ತು ಸ್ನೇಹಿತರು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ವರುಣ್‌ ಸಾವಿಗೀಡಾಗಿದ್ದಾರೆ.

 

ಆರೋಪಿ ಸೂರಜ್‌ ಮತ್ತು ಆತನ ಜೊತೆಗಿದ್ದ ರವಿರಾಜ್‌ ಇವರಿಬ್ಬರನ್ನು ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!