Friday, June 5, 2026
Homeಕರಾವಳಿಕಾಸರಗೋಡುಕಾಸರಗೋಡು; ತಾನೇ ಚಲಾಯಿಸುತ್ತಿದ್ದ ಲಾರಿಯಡಿಗೆ ಸಿಲುಕಿ ಚಾಲಕ ಸಾವು

ಕಾಸರಗೋಡು; ತಾನೇ ಚಲಾಯಿಸುತ್ತಿದ್ದ ಲಾರಿಯಡಿಗೆ ಸಿಲುಕಿ ಚಾಲಕ ಸಾವು

- Advertisement -
- Advertisement -

ಕಾಸರಗೋಡು; ಲಾರಿಯಡಿಗೆ ಸಿಲುಕಿ ಚಾಲಕ ಸಾವನ್ನಪ್ಪಿರುವ ಘಟನೆ ಬದಿಯಡ್ಕ ಸಮೀಪದ ನೀರ್ಚಾಲ್ ಗೋಳಿಯಡ್ಕದಲ್ಲಿ ನಡೆದಿದೆ.

ಪಾಡಿ ಉತ್ತರತ್ತೋಡಿಯ ಮುಹಮ್ಮದ್ ನೌಫಲ್ (23) ಮೃತ ಚಾಲಕ. ನೌಫಲ್ ಲಾರಿಯನ್ನು ಸ್ಟಾರ್ಟ್ನಲ್ಲಿರಿಸಿ ಗೇಟ್ ತೆರೆಯಲು ಹೋದ ಸಂದರ್ಭದಲ್ಲಿ ಅದೇ ಲಾರಿ ಮುಂದಕ್ಕೆ ಚಲಿಸಿದ ಕಾರಣ ಲಾರಿಯಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಕೂಡಲೇ ನೌಫಲ್ ಗೆ ಕುಂಬಳೆಯ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಬದಿಯಡ್ಕ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!