Saturday, June 6, 2026
Homeಕರಾವಳಿಉಡುಪಿಉಡುಪಿ: ಮದ್ಯ ಸೇವಿಸಿ ಅಪಘಾತ ಎಸಗಿ ಪೊಲೀಸರೊಂದಿಗೆ ಕಿರಿಕ್!

ಉಡುಪಿ: ಮದ್ಯ ಸೇವಿಸಿ ಅಪಘಾತ ಎಸಗಿ ಪೊಲೀಸರೊಂದಿಗೆ ಕಿರಿಕ್!

- Advertisement -
- Advertisement -

ಉಡುಪಿ: ಮದ್ಯಪಾನದ ಮತ್ತಿನಲ್ಲಿ ವಾಹನ ಚಲಾಯಿಸಿದ ವ್ಯಕ್ತಿಯೋರ್ವ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಉಡುಪಿ ನಗರದಲ್ಲಿ ನಡೆದಿದೆ.

ಉಡುಪಿ‌ ನಗರದ ಸಿಟಿ ಬಸ್ ನಿಲ್ದಾಣ ಬಳಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಎರಡು ಕಾರುಗಳು ಮತ್ತು ಒಂದು ಸ್ಕೂಟಿ ಜಖಂಗೊಂಡಿವೆ. ಅಪಘಾತ ನಡೆಸಿದ ಬಳಿಕ ಮದ್ಯ ಸೇವಿಸಿದ್ದ ವ್ಯಕ್ತಿ ತಾನು ಧರಿಸಿದ್ದ ಶರ್ಟ್ ಕಿತ್ತೆಸೆದು ರಾದ್ದಾಂತ ಮಾಡಿದ್ದು, ಸಾರ್ವಜನಿಕರು ಮತ್ತು ಟ್ರಾಫಿಕ್ ಪೊಲೀಸರ ಜೊತೆಯೂ ವಾಗ್ವಾದ ನಡೆಸಿದ್ದಾನೆ. ಡಿಕ್ಕಿ ಹೊಡೆದು ಕಿರಿಕ್ ಮಾಡಿದ ವ್ಯಕ್ತಿಯನ್ನು ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದಿದ್ದು ಡ್ರಂಕ್ ಆಂಡ್ ಡ್ರೈವ್ ಕೇಸ್ ದಾಖಲು ಮಾಡಿಕೊಂಡಿದ್ದಾರೆ.

- Advertisement -

Latest News

error: Content is protected !!