Wednesday, June 3, 2026
Homeಕರಾವಳಿಡಿ. 14 ರಿಂದ ಆಳ್ವಾಸ್ ವಿರಾಸತ್

ಡಿ. 14 ರಿಂದ ಆಳ್ವಾಸ್ ವಿರಾಸತ್

- Advertisement -
- Advertisement -

ಮೂಡುಬಿದಿರೆ: ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಪ್ರತಿವರ್ಷ ಆಚರಿಸಲ್ಪಡುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ಪ್ರಸಕ್ತ ಸಾಲಿನಲ್ಲಿ ಡಿ.14ರಿಂದ 17ರ ವರೆಗೆ ನಡೆಯಲಿದೆ.

ಈ ಬಾರಿ ಆಳ್ವಾಸ್ ವಿರಾಸತ್‌ 29ನೇ ವರ್ಷವನ್ನು ಪೂರೈಸುತ್ತಿದ್ದು, ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ, ಸಂಸ್ಕೃತಿಪ್ರಿಯರಿಗೆ ರಸದೌತಣ ನೀಡಲು ವಿಭಿನ್ನ ಯೋಜನೆಗಳನ್ನು ಮಾಡಿದೆ. ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆಳ್ವಾಸ್ ಆವರಣದಲ್ಲಿನ ವಿವಿಧ ವೇದಿಕೆಗಳಲ್ಲಿ ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 9.30ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಸಭಾಂಗಣದಲ್ಲಿ ಸುಮಾರು 50 ಸಾವಿರ ಪ್ರೇಕ್ಷಕರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

- Advertisement -

Latest News

error: Content is protected !!