Saturday, October 17, 2026
Homeಕರಾವಳಿಉಡುಪಿಉಡುಪಿ: ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಇಂಜಿನಿಯರ್ ಕಚೇರಿ ಮತ್ತು ಮನೆ ಮೇಲೆ ಲೋಕಾಯುಕ್ತ ದಾಳಿ

ಉಡುಪಿ: ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಇಂಜಿನಿಯರ್ ಕಚೇರಿ ಮತ್ತು ಮನೆ ಮೇಲೆ ಲೋಕಾಯುಕ್ತ ದಾಳಿ

- Advertisement -
- Advertisement -

ಉಡುಪಿ: ಉಡುಪಿಯಲ್ಲಿ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉಡುಪಿಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಇಂಜಿನಿಯರ್ ರಾಜೇಶ್ ಬೇಳ್ಕೆರೆ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆದಿದೆ.

ಕುಂದಾಪುರದ ಸಲೀಂ ಆಲಿ ರಸ್ತೆಯಲ್ಲಿರುವ ರಾಜೇಶ್ ನಿವಾಸ, ಉಡುಪಿಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮತ್ತು ಅಂಕೋಲಾದಲ್ಲಿರುವ ನಿವಾಸ ಸೇರಿ ಒಟ್ಟು ಮೂರು ಕಡೆ ದಾಳಿ ನಡೆಸಲಾಗಿದೆ.

ರಾಜೇಶ್ ಬೇಳ್ಕೆರೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾಗಿದ್ದಾರೆ.ರಾಜ್ಯದಲ್ಲಿ ಇಂದು ಬೆಳಗ್ಗೆ ಸುಮಾರು 90 ಕ್ಕೂ ಕಡೆ ಲೋಕಾಯುಕ್ತ ದಾಳಿ ನಡೆದಿದೆ.

- Advertisement -

Latest News

error: Content is protected !!