Saturday, June 13, 2026
Homeಅಪರಾಧಆನ್ ಲೈನ್ ಜಾಬ್ ಅಫರ್ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಂಗನಾಮ; ಅಪರಿಚಿತನಿಂದ ಮಹಿಳೆಗೆ ವಂಚನೆ

ಆನ್ ಲೈನ್ ಜಾಬ್ ಅಫರ್ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಂಗನಾಮ; ಅಪರಿಚಿತನಿಂದ ಮಹಿಳೆಗೆ ವಂಚನೆ

- Advertisement -
- Advertisement -

ಧರ್ಮಸ್ಥಳ: ಮಹಿಳೆಯೋರ್ವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಆನ್ ಲೈನ್ ಜಾಬ್ ಅಫರ್ ನೆಪದಲ್ಲಿ ಕರೆಮಾಡಿ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕಾಯರ್ತ್ತಡ್ಕದಲ್ಲಿ ನಡೆದಿದೆ.

ವಂಚನೆಗೊಳಗಾದ ಯುವತಿ ಧರ್ಮಸ್ಥಳ ಮೂಲದ ಉಷಾ ಪಿ.ವಿ.

ಅಪರಿಚಿತ ವ್ಯಕ್ತಿಯೊಬ್ಬ ಉಷಾ ಅವರಿಗೆ ಕರೆಮಾಡಿ, ಅನ್ ಲೈನ್ ಜಾಬ್ ಅಫರ್ ಎಂಬ ಸುಳ್ಳು ಸುದ್ದಿ ನೀಡಿದ್ದು, ನಂತರದಲ್ಲಿ ಆರೋಪಿ ಇವರಿಗೆ ಅನೇಕ ಕಾರಣಗಳನ್ನು ನೀಡಿ ಹಣ ಪಡೆದುಕೊಂಡಿದ್ದಾನೆ. ಇಲ್ಲಿಯವರೆಗೆ ಯುವತಿಯು ಆತನಿಗೆ ಒಟ್ಟು ರೂ. 4,25,934/ ಗಳನ್ನು ನೀಡಿದ್ದು, ಆತ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು, ಮೋಸ ಮಾಡಿರುತ್ತಾನೆ ಎಂದು ಮಹಿಳೆ ದೂರು ನೀಡಿದ್ದಾರೆ.

ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.

- Advertisement -

Latest News

error: Content is protected !!