Thursday, June 4, 2026
Homeಕರಾವಳಿಮಂಗಳೂರು ಬಂದರಿನಲ್ಲಿ ವಶಪಡಿಸಿಕೊಂಡಿದ್ದ ರಕ್ತ ಚಂದನ 28 ಕೋಟಿ ರೂ.ಗೆ ಹರಾಜು

ಮಂಗಳೂರು ಬಂದರಿನಲ್ಲಿ ವಶಪಡಿಸಿಕೊಂಡಿದ್ದ ರಕ್ತ ಚಂದನ 28 ಕೋಟಿ ರೂ.ಗೆ ಹರಾಜು

- Advertisement -
- Advertisement -

ಮಂಗಳೂರು: ಪಣಂಬೂರು ಬಂದರಿನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದ ರಕ್ತ ಚಂದನ 28 ಕೋಟಿಗೆ ಹರಾಜುಗೊಂಡಿದೆ.ಆನ್‌ಲೈನ್‌ ಹರಾಜಿನಲ್ಲಿ ಮೂರು ಏಜೆನ್ಸಿ ಗಳು 28 ಕೋಟಿ ರೂಪಾಯಿಗಳಿಗೆ ಬಿಡ್ ಮಾಡಿವೆ. 2008ರಿಂದ 2023ರವರೆಗೆ ಒಟ್ಟು ನಾಲ್ಕು ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 56.2 ಮೆಟ್ರಿಕ್ ಟನ್ ನಷ್ಟು ರಕ್ತ ಚಂದನವನ್ನು ಹರಾಜು ಹಾಕಲಾಗಿತ್ತು.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಅರಣ್ಯ ಇಲಾಖೆ ಒಟ್ಟು 2,094 ದಿಮ್ಮಿಗಳನ್ನು ಆನ್‌ಲೈನ್ ಮೂಲಕ ಹರಾಜು ಹಾಕಿದೆ.ಎ ಕೆಟಗರಿಯಲ್ಲಿ ಮೂರು ಲಾಟ್, ಬಿ ಕೆಟಗರಿಯಲ್ಲಿ ಆರು ಲಾಟ್, ಸಿ ಕೆಟಗರಿಯಲ್ಲಿ ಆರು ಲಾಟ್ ಮತ್ತು ಡಿ ಕೆಟಗರಿಯಲ್ಲಿ ಆರು ಲಾಟ್‌ ಗಳಾಗಿ ವಿಂಗಡಿಸಲಾಗಿದ್ದು, ಮೂರು ಬಿಡ್‌ಗಳ ಒಟ್ಟು ಮೊತ್ತ ತೆರಿಗೆ ಸೇರಿ 28 ಕೋಟಿ ರೂಪಾಯಿ ಆಗಿದೆ.

ಚೀನಾ, ದುಬೈ ಮತ್ತು ಜಪಾನ್ ಸೇರಿದಂತೆ ಇತರ ದೇಶಗಳಲ್ಲಿ ರಕ್ತಚಂದನಕ್ಕೆ ಅಪಾರ ಬೇಡಿಕೆ ಇದೆ.

- Advertisement -

Latest News

error: Content is protected !!