Friday, June 5, 2026
Homeಕರಾವಳಿಮಂಗಳೂರು; ಉಳ್ಳಾಲದಲ್ಲಿ ಆಹಾರದಲ್ಲಿ ವಿಷ ಹಾಕಿದ ಪಾಪಿ; 9ಕ್ಕೂ ಅಧಿಕ ನಾಯಿಗಳು ಹಾಗೂ ಒಂದು ದನ...

ಮಂಗಳೂರು; ಉಳ್ಳಾಲದಲ್ಲಿ ಆಹಾರದಲ್ಲಿ ವಿಷ ಹಾಕಿದ ಪಾಪಿ; 9ಕ್ಕೂ ಅಧಿಕ ನಾಯಿಗಳು ಹಾಗೂ ಒಂದು ದನ ಸಾವು

- Advertisement -
- Advertisement -

ಮಂಗಳೂರು; ಪಾಪಿಗಳು ಆಹಾರದಲ್ಲಿ ವಿಷ ಹಾಕಿದ ಪರಿಣಾಮ 9ಕ್ಕೂ ಅಧಿಕ ನಾಯಿಗಳು ಹಾಗೂ ಒಂದು ದನ ಸಾವನ್ನಪ್ಪಿರುವ ಘಟನೆ ತಲಪಾಡಿ ಅಲಂಕಾರುಗುಡ್ಡೆ ಎಂಬಲ್ಲಿ ನಡೆದಿದೆ.

ಅಪರಿಚಿತ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ನಾಯಿಗಳಿಗೆ ಆಹಾರ ಹಾಕುತ್ತಾ ಹೋಗಿದ್ದ. ಆ ಬಳಿಕ ಅಲ್ಲಲ್ಲಿ ನಾಯಿಗಳು ಸತ್ತುಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ‌. ಕೆಲವು ನಾಯಿಗಳ ಕಳೇಬರ ಕೊಳೆತು ದುರ್ನಾತ ಬೀರುತ್ತಿದೆ. ಕೆಲವು ನಾಯಿಗಳನ್ನು ಸ್ಥಳೀಯರು ಮಣ್ಣಲ್ಲಿ ಹೂತಿದ್ದಾರೆ. ಅಲಂಕಾರುಗುಡ್ಡೆ ನಿವಾಸಿ ಸತ್ಯೇಂದ್ರ ಎಂಬವರಿಗೆ ಸೇರಿದ ಹಾಲು ನೀಡುವ ದನ ಹಾಗೂ ಸ್ಥಳೀಯರ ನಾಯಿಗಳು ಎರಡು ದಿನಗಳಲ್ಲಿ ಅಸುನೀಗಿವೆ. ಈ ಕೃತ್ಯದ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ್ದಾರೆ.

- Advertisement -

Latest News

error: Content is protected !!