Sunday, June 14, 2026
Homeಕರಾವಳಿಕಾಸರಗೋಡುಕಾಸರಗೋಡಿನಲ್ಲಿ ಜಿಲ್ಲಾ ನೋಂದಣಾಧಿಕಾರಿ ಅನುಮಾನಾಸ್ಪದವಾಗಿ ಸಾವು

ಕಾಸರಗೋಡಿನಲ್ಲಿ ಜಿಲ್ಲಾ ನೋಂದಣಾಧಿಕಾರಿ ಅನುಮಾನಾಸ್ಪದವಾಗಿ ಸಾವು

- Advertisement -
- Advertisement -

ಕಾಸರಗೋಡು: ಜಿಲ್ಲಾ ನೋಂದಣಾಧಿಕಾರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.ಮಲಪ್ಪುರಂ ನಿವಾಸಿ ಟಿ. ಇ ಮುಹಮ್ಮದ್ ಅಶ್ರಫ್ (55) ಮೃತ ಜಿಲ್ಲಾ ನೋಂದಣಾಧಿಕಾರಿ.

ಕಾಸರಗೋಡು ಜಿಲ್ಲಾ ನೋಂದಣಿ ಅಧಿಕಾರಿಯಾಗಿದ್ದ ಇವರು ನಗರ ಹೊರವಲಯದ ಹೊಟೇಲೊಂದರಲ್ಲಿ ಜುಲೈ19 ರಂದು ರೂಂ ಪಡೆದು ವಾಸ್ತವ್ಯ ಹೂಡಿದ್ದರು.ಬೆಳಿಗ್ಗೆ ಅಶ್ರಫ್ ರವರು ರೂಂ ನಿಂದ ಹೊರಬರದೆ, ಮೊಬೈಲ್ ಕರೆಯನ್ನೂ ಸ್ವೀಕರಿಸದೆ ಇದ್ದುದರಿಂದ ಸಂಶಯಗೊಂಡು ಬಾಗಿಲು ತೆರೆದು ನೋಡಿದಾಗ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ಪತ್ರೆಗೆ ತಲುಪಿಸಿ ತಪಾಸಣೆ ನಡೆಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ಧೃಡೀಕರಿಸಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ .

- Advertisement -

Latest News

error: Content is protected !!