Wednesday, June 3, 2026
Homeಕರಾವಳಿಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿ ಸರಣಿ ಕಳ್ಳತನ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿ ಸರಣಿ ಕಳ್ಳತನ

- Advertisement -
- Advertisement -

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿದೆ. ಎರಡು ಅಂಗಡಿಗಳ ಬೀಗ ಮುರಿದ ಕಳ್ಳರು ಅಂಗಡಿಯ ಡ್ರಾಯರ್‌ನಲ್ಲಿ ಇರಿಸಿದ್ದ ಹಣವನ್ನು ಕಳ್ಳತನ ಮಾಡಿದ್ದಾರೆ.

ಆಲೆಟ್ಟಿ ಗ್ರಾಮದ ನಾಗಪಟ್ಟಣ ಬಸ್‌ ನಿಲ್ದಾಣದ ಜೊತೆಗೆ ಇರುವ ಪಂಚಾಯತ್‌ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿದ್ದ ಪುಷ್ಪರಾಜ್‌ ಎಂಬವರ ಅಂಗಡಿ ಮತ್ತು ಮಿತ್ತಡ್ಕದ ರೋಟರಿ ಶಾಲಾ ಮುಂಭಾಗದಲ್ಲಿನ ಬಸ್‌ ನಿಲ್ದಾಣದ ಪಂಚಾಯತ್‌ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿದ್ದ ದಾಮೋದರ ರವರ ಅಂಗಡಿಯಿಂದ ಕಳ್ಳತನ ನಡೆದಿದೆ.

ರಾತ್ರಿ ವೇಳೆ ಬೀಗಮುರಿದ ಕಳ್ಳರು ದಾಮೋದರ ರವರ ಅಂಗಡಿಯ ಡ್ರವರ್‌ನಲ್ಲಿದ್ದ ಸುಮಾರು 10,000 ನಗದು ದೋಚಿದ್ದಾರೆ, ನಾಗಪಟ್ಟಣ ಅಂಗಡಿಯಲ್ಲಿದ್ದ 500 ರೂ. ರಷ್ಟು ಚಿಲ್ಲರೆ ಹಣ ಕಳವವಾಗಿದ್ದು ಅದೇ ಅಂಗಡಿಯ ಪ್ರಿಡ್ಜ. ನಲ್ಲಿರಿಸಿದ್ದ ಜ್ಯೂಸ್‌ ಕುಡಿದು ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!