Saturday, June 6, 2026
Homeಕರಾವಳಿಉಡುಪಿಉಡುಪಿ:ಅಪಾರ್ಟ್ ಮೆಂಟ್ ನ 10ನೇ ಫ್ಲೋರ್ ನ ಕಿಟಕಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ವಿಶೇಷ ಚೇತನಾ ಬಾಲಕನ...

ಉಡುಪಿ:ಅಪಾರ್ಟ್ ಮೆಂಟ್ ನ 10ನೇ ಫ್ಲೋರ್ ನ ಕಿಟಕಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ವಿಶೇಷ ಚೇತನಾ ಬಾಲಕನ ರಕ್ಷಣೆ

- Advertisement -
- Advertisement -

ಉಡುಪಿ:ಅಪಾರ್ಟ್ ಮೆಂಟ್ ನ 10ನೇ ಫ್ಲೋರ್ ನ ಕಿಟಕಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ವಿಶೇಷ ಚೇತನಾ ಬಾಲಕನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದಿದೆ.


ವಿಶೇಷಚೇತನನಾಗಿರುವ ಎಂಟು ವರ್ಷದ ಬಾಲಕ ಆರುಷ್ ಅಪಾರ್ಟ್ಮೆಂಟ್‌ನ 10 ಪ್ಲೋರ್‌ನ ಕಿಟಕಿಯಲ್ಲಿ ಸಿಲುಕಿಕೊಂಡಿದ್ದ . ಈತ ಹನ್ನೊಂದನೇ ಮಹಡಿ ಬಾಲ್ಕನಿ ಮೂಲಕ ಹೊರ ಹೋಗಿ ಹತ್ತನೇ ಪ್ಲೋರ್‌ನ ಕಿಟಕಿ ಪೋರಂ‌ನಲ್ಲಿ ಸಿಕ್ಕಿಕೊಂಡು ಅಪಾಯದಲ್ಲಿ ಸಿಲುಕಿದ್ದ. ಮಾಹಿತಿ ದೊರೆತ ತಕ್ಷಣ ಸಕಾಲಕ್ಕೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆತಂಕಕ್ಕೆ ಒಳಗಾದ ಆರುಷ್ ಪೋಷಕರು ಯಶಸ್ವಿ ಕಾರ್ಯಚರಣೆಯಿಂದ ನಿಟ್ಟುಸಿರುಬಿಟ್ಟಿದ್ದಾರೆ.

- Advertisement -

Latest News

error: Content is protected !!