Friday, June 5, 2026
Homeಕರಾವಳಿಅಮರನಾಥ ಯಾತ್ರೆ ಕೈಗೊಂಡಿರುವ ದ.ಕ. ಜಿಲ್ಲೆಯ 20 ಯಾತ್ರಾರ್ಥಿಗಳು ಸುರಕ್ಷಿತ

ಅಮರನಾಥ ಯಾತ್ರೆ ಕೈಗೊಂಡಿರುವ ದ.ಕ. ಜಿಲ್ಲೆಯ 20 ಯಾತ್ರಾರ್ಥಿಗಳು ಸುರಕ್ಷಿತ

- Advertisement -
- Advertisement -

ಮಂಗಳೂರು: ಅಮರನಾಥ ಯಾತ್ರೆಗೆ ತೆರಳಿರುವ ದಕ್ಷಿಣ ಕನ್ನಡ ಜಿಲ್ಲೆಯ 20 ಮಂದಿ ಯಾತ್ರಾರ್ಥಿಗಳು ಸಿಆರ್ ಪಿಎಫ್ ಕ್ಯಾಂಪ್ ನಲ್ಲಿ ಸುರಕ್ಷಿತವಾಗಿದ್ದಾರೆ.

ಬಂಟ್ವಾಳ ತಾಲೂಕಿನ ನರಿಕೊಂಬಿನ ಸಂತೋಷ್ ಮಾರುತಿನಗರ ನೇತೃತ್ವದಲ್ಲಿ ತೆರಳಿರುವ 20 ಯಾತ್ರಾರ್ಥಿಗಳು, ರಂಭಾನ್ ಎಂಬ ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ಅಮರನಾಥ ದಾರಿ ಸಂಪೂರ್ಣ ಕ್ಲೋಸ್ ಆಗಿರುವ ಕಾರಣ ಸಿಆರ್ ಪಿಎಫ್ ಕ್ಯಾಂಪ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಮಣ್ಣು ತೆರವು ಕಾರ್ಯ ನಡೆಯುತ್ತಿದ್ದರೂ ಮತ್ತೆ ಭೂಕುಸಿತವಾಗುತ್ತಿರುವ ಕಾರಣ ಅತ್ತ ಅಮರನಾಥಕ್ಕೂ ತೆರಳಲಾಗದೇ ಇತ್ತ ಜಮ್ಮುವಿಗೂ ತೆರಳಲಾಗದೇ ಕಾಯುವಂತಾಗಿದೆ.

20 ಜನ ಯಾತ್ರಾರ್ಥಿಗಳ ತಂಡ ಜುಲೈ 4ರಂದು ರೈಲಿನ ಮೂಲಕ ಅಮರನಾಥ ಯಾತ್ರೆ ಕೈಗೊಂಡಿದ್ದರು.

- Advertisement -

Latest News

error: Content is protected !!