Wednesday, June 3, 2026
Homeಕರಾವಳಿಮಂಗಳೂರು; ಕಟ್ಟಡದ ಮೇಲಿದ್ದ ಹೋರ್ಡಿಂಗ್ ಬಿದ್ದು ಹಲವು ವಾಹನಗಳು ಜಖಂ

ಮಂಗಳೂರು; ಕಟ್ಟಡದ ಮೇಲಿದ್ದ ಹೋರ್ಡಿಂಗ್ ಬಿದ್ದು ಹಲವು ವಾಹನಗಳು ಜಖಂ

- Advertisement -
- Advertisement -

ಮಂಗಳೂರು; ಕಟ್ಟಡದ ಮೇಲಿದ್ದ ಹೋರ್ಡಿಂಗ್ ಬಿದ್ದು ಹಲವು ವಾಹನಗಳು ಜಖಂ ಆಗಿರುವ ಘಟನೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನಡೆದಿದೆ.

‘ಹೋರ್ಡಿಂಗ್ ಬಿದ್ದ ಪರಿಣಾಮ ಪಾರ್ಕ್ ಮಾಡಲಾಗಿದ್ದ 12ಕ್ಕೂ ಅಧಿಕ ವಾಹನಗಳಿಗೆ ಹಾನಿಯಾಗಿದ್ದು, ವಿದ್ಯುತ್ ಕಂಬಗಳೂ ಬಿದ್ದು ಹಾನಿಯಾಗಿವೆ. ಮನಪಾ ಅಧಿಕಾರಿಗಳು ತುರ್ತು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿತ್ಯ ಜನಸಂಚಾರವಿರುವ, ಈ ಜಾಗದಲ್ಲಿ ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯ ನಡೆದಿಲ್ಲ’ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ.ಶಾಲಾ ಕಾಲೇಜು ರಜೆ ಇದ್ದ ಕಾರಣ ಈ ಘಟನೆ ಸಂಭವಿಸುವ ಸಂದರ್ಭ ಜನರ ಓಡಾಟ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. 

- Advertisement -

Latest News

error: Content is protected !!