Thursday, June 4, 2026
Homeಕರಾವಳಿಕಾಸರಗೋಡುಕಾಸರಗೋಡಿನಲ್ಲಿ ಭಾರೀ ಗಾಳಿ ಮಳೆಗೆ ಮರ ಬಿದ್ದು ಆಟವಾಡುತ್ತಿದ್ದ ಬಾಲಕಿ ಸಾವು

ಕಾಸರಗೋಡಿನಲ್ಲಿ ಭಾರೀ ಗಾಳಿ ಮಳೆಗೆ ಮರ ಬಿದ್ದು ಆಟವಾಡುತ್ತಿದ್ದ ಬಾಲಕಿ ಸಾವು

- Advertisement -
- Advertisement -

ಕಾಸರಗೋಡು: ಭಾರೀ ಗಾಳಿ ಮಳೆಗೆ ಮರ ಬಿದ್ದು ಆಟವಾಡುತ್ತಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಪುತ್ತಿಗೆ ಸಮೀಪದ ಅಂಗಡಿಮೊಗರಿನಲ್ಲಿ ನಡೆದಿದೆ.

ಬಿ. ಎಂ ಯೂಸಫ್- ಫಾತಿಮ್ಮತ್ ಸೈನಬಾ ದಂಪತಿ ಪುತ್ರಿ, ಆರನೇ ತರಗತಿ ವಿದ್ಯಾರ್ಥಿನಿ ಆಯಿಷತ್ ಮಿನ್ ಹಾ (11) ಮೃತ ಬಾಲಕಿ.

ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬಾಲಕಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಮರವು ಮುರಿದು ಬಿದ್ದಿದ್ದೆ. ಕೂಡಲೇ ಅಲ್ಲಿದ್ದವರು ಬಾಲಕಿಯನ್ನು ಮರದಡಿಯಿಂದ ಹೊರ ತೆಗೆದು ಕುಂಬಳೆಯ ಆಸ್ಪತ್ರೆಗೆ ಸಾಗಿಸಿದರೂ ಈ ವೇಳೆ ಬಾಲಕಿ ಮೃತಪಟ್ಟಿದ್ದಳು ಎನ್ನಲಾಗಿದೆ.

- Advertisement -

Latest News

error: Content is protected !!