Sunday, June 7, 2026
Homeಕರಾವಳಿಮಂಗಳೂರು:ಬಾವುಟಗುಡ್ಡೆಯ ಅಪಾರ್ಟ್ ಮೆಂಟ್ ಒಂದರಲ್ಲಿ ಬೆಂಕಿ ಅವಘಡ

ಮಂಗಳೂರು:ಬಾವುಟಗುಡ್ಡೆಯ ಅಪಾರ್ಟ್ ಮೆಂಟ್ ಒಂದರಲ್ಲಿ ಬೆಂಕಿ ಅವಘಡ

- Advertisement -
- Advertisement -

ಮಂಗಳೂರು: ವಸತಿ ಸಂಕೀರ್ಣವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ  ಶುಕ್ರವಾರ ಬಾವುಟಗುಡ್ಡೆಯಲ್ಲಿ ನಡೆದಿದೆ.ಇಲ್ಲಿನ 21 ಅಂತಸ್ತುಗಳ ಈ ವಸತಿ ಸಂಕೀರ್ಣದ ಲಿಫ್ಟ್‌ನ ಡೆಕ್ ವಯರಿಂಗ್ ಸ್ಥಳದಲ್ಲಿ ಸಂಜೆ ಸುಮಾರು 6:30ರ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

ಕೂಡಲೇ ದಟ್ಟ ಹೊಗೆ ಆವರಿಸಿದೆ. ಆಗ ಕೆಲವರು ವಸತಿ ಸಂಕೀರ್ಣದಿಂದ ಹೊರಗೆ ಬಂದಿದ್ದಾರೆ. ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗವು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಉಸಿರಾಟದ ಸಮಸ್ಯೆಯಿಂದ ಕೆಲವರು ಬಳಲಿದ್ದು, ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು ಎನ್ನಲಾಗಿದೆ.

- Advertisement -

Latest News

error: Content is protected !!