Friday, June 5, 2026
Homeಕರಾವಳಿಮಂಗಳೂರು; ಉಳ್ಳಾಲದಲ್ಲಿ ಮಹಿಳೆಯನ್ನು ಯುವಕರು ಬೆನ್ನಟ್ಟಿದ ಪ್ರಕರಣ; ಓರ್ವನನ್ನು ಬಂಧಿಸಿದ ಪೊಲೀಸರು

ಮಂಗಳೂರು; ಉಳ್ಳಾಲದಲ್ಲಿ ಮಹಿಳೆಯನ್ನು ಯುವಕರು ಬೆನ್ನಟ್ಟಿದ ಪ್ರಕರಣ; ಓರ್ವನನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು; ಉಳ್ಳಾಲದಲ್ಲಿ ಮಹಿಳೆಯನ್ನು ಯುವಕರು ಬೆನ್ನಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ತಲಪಾಡಿ ನೆಕ್ಕೆಗುಡ್ಡೆ ಮಹಿಳೆ ತನ್ನ ಮಗಳನ್ನು ಕರೆದುಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಇಬ್ಬರು ಯುವಕರು ನೆಕ್ಕೆಗುಡ್ಡೆ ಬಳಿ ಕಾರು ನಿಲ್ಲಿಸಿ ಮಹಿಳೆ ಮತ್ತು ಮಗಳನ್ನು ಬೆನ್ನಟ್ಟಿಕೊಂಡು ಬಂದಿದ್ದರು ಎನ್ನಲಾಗಿದೆ. ಹೆದರಿದ ಮಹಿಳೆ ಅಂಗಡಿ ಬಳಿ ರಕ್ಷಣೆ ಪಡೆದಿದ್ದರು,  ಈ ವೇಳೆ ಬೆನ್ನಟ್ಟಿಕೊಂಡು ಬಂದ ಯುವಕರು ವಾಪಸ್ ಆಗಿದ್ದರು.

ಇನ್ನು ಮಹಿಳೆ ಮತ್ತು ಮಗಳನ್ನು ಬೆನ್ನಟ್ಟಿ ಕೊಂಡು ಬಂದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!