Sunday, June 7, 2026
Homeಕರಾವಳಿಮಂಗಳೂರು: ಕೆಲಸಕ್ಕೆ ಹೋಗಿ ಬರೋದಾಗಿ‌ ಹೇಳಿ ಹೋದ ಮಹಿಳೆ ನಾಪತ್ತೆ

ಮಂಗಳೂರು: ಕೆಲಸಕ್ಕೆ ಹೋಗಿ ಬರೋದಾಗಿ‌ ಹೇಳಿ ಹೋದ ಮಹಿಳೆ ನಾಪತ್ತೆ

- Advertisement -
- Advertisement -

ಮಂಗಳೂರು: ಕೆಲಸಕ್ಕೆ ಹೋಗಿ ಬರೋದಾಗಿ‌ ಹೇಳಿ ಹೋಗಿ ಮಹಿಳೆ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಮಿತಾ ಬಂಗೇರ (29) ನಾಪತ್ತೆಯಾದ ಮಹಿಳೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮಿತಾ ಬಂಗೇರ ಅವರಿಗೆ 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಪತಿ ನಾಲ್ಕೂವರೆ ವರ್ಷಗಳಿಂದ ವಿದೇಶದಲ್ಲಿದ್ದಾರೆ.ನಮಿತಾ ಟೂರಿಸ್ಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಜೂ.19ರಂದು ಬೆಳಗ್ಗೆ ಸಂಬಳ ತರಲು ಕಚೇರಿಗೆ ಹೋಗುವುದಾಗಿ ತಿಳಿಸಿ ಹೋದವರು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

5.4 ಅಡಿ ಎತ್ತರ, ಬಿಳಿ ಮೈಬಣ್ಣ, ದಪ್ಪ ಶರೀರ, ದುಂಡು ಮುಖ ಹೊಂದಿದ್ದು ಕನ್ನಡ, ತುಳು, ಇಂಗ್ಲಿಷ್, ಹಿಂದಿ ಭಾಷೆ ಮಾತನಾಡುತ್ತಾರೆ. ಗುಲಾಬಿ ಬಣ್ಣದ ಕುರ್ತಾ ಧರಿಸಿದ್ದರು. ಮಾಹಿತಿ ದೊರೆತವರು ಬರ್ಕೆ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!