Sunday, October 18, 2026
Homeತಾಜಾ ಸುದ್ದಿನನಗೆ ಹುಡುಗಿ ಸಿಗುತ್ತಿಲ್ಲ,ಕನ್ಯಾ ಭಾಗ್ಯ ನೀಡಿ; ಪಿಡಿಓಗೆ ಪತ್ರ ಬರೆದ ಯುವಕ

ನನಗೆ ಹುಡುಗಿ ಸಿಗುತ್ತಿಲ್ಲ,ಕನ್ಯಾ ಭಾಗ್ಯ ನೀಡಿ; ಪಿಡಿಓಗೆ ಪತ್ರ ಬರೆದ ಯುವಕ

- Advertisement -
- Advertisement -

ಗದಗ: ನನಗೆ ಹುಡುಗಿ ಸಿಗುತ್ತಿಲ್ಲ,ಕನ್ಯಾ ಭಾಗ್ಯ ನೀಡಿ ಎಂದು ಯುವಕನೊಬ್ಬ ಸರ್ಕಾರಕ್ಕೆ ಪತ್ರ ಬರೆದಿದ್ದು ಪತ್ರ ಭಾರೀ ವೈರಲ್ ಆಗಿದೆ.  

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಮುತ್ತು ಹೂಗಾರ (28) ಎಂಬ ಯುವಕ ಅಲ್ಲಿನ ಸ್ಥಳೀಯ ಗ್ರಾಮ ಪಂಚಾಯತ್​​ ಪಿಡಿಒಗೆ ಪತ್ರ ಬರೆದಿದ್ದಾನೆ, ಈಗ ಇದು ವೈರಲ್ ಆಗುತ್ತಿದೆ.

ಹೂಗಾರ್‌ ಬರೆದಿರುವ ಪತ್ರದಲ್ಲಿ ನಾನು ಗುತ್ತೆದಾರರನಾಗಿ ಕೆಲಸ ಮಾಡುತ್ತಿದ್ದು, ಈ ನಡುವೆ ನಾನು ನನ್ನ ಮದುವೆ ಸಲುವಾಗಿ ಊರೂರಿನಲ್ಲಿ ವಧುವಿಗಾಗಿ ಅಲೆಯುತ್ತಿದ್ದೇನೆ. ಆದರೆ ಯಾರು ಕೂಡ ನನ್ನ ಮದುವೆಯಾಗಲು ಮುಂದೆ ಬರುತ್ತಿಲ್ಲ, ಎಲ್ಲರೂ ಕೂಡ ಸರ್ಕಾರಿ ಹುದ್ದೆಯಲ್ಲಿರುವ ವರ ಬೇಕು ಎನ್ನುತ್ತಿದ್ದಾರೆ. ತಾವೂಗಳು ನನ್ನ ಮದುವೆಗಾಗಿ ಯಾವುದೇ ಜಾತಿಯ ಕನ್ಯೆಯನ್ನು ಹುಡುಕಿಕೊಡಬೇಕಾಗಿ ವಿನಂತಿ ಮಾಡಿಕೊಳ್ಳುವೆ ಅಂತ ಹೇಳಿಕೊಂಡಿದ್ದಾರೆ. ಈಗ ಈ ಪತ್ರ ವೈರಲ್‌ ಆಗಿದೆ.

- Advertisement -

Latest News

error: Content is protected !!