Saturday, June 13, 2026
Homeಕರಾವಳಿಉಡುಪಿಉಡುಪಿ: ಖ್ಯಾತ ಸ್ಯಾಕ್ಸೋಫೋನ್ ವಾದಕ ಅಲೆವೂರು ಸುಂದರ ಸೇರಿಗಾರ ನಿಧನ

ಉಡುಪಿ: ಖ್ಯಾತ ಸ್ಯಾಕ್ಸೋಫೋನ್ ವಾದಕ ಅಲೆವೂರು ಸುಂದರ ಸೇರಿಗಾರ ನಿಧನ

- Advertisement -
- Advertisement -

ಉಡುಪಿ: ಅನಾರೋಗ್ಯದ ನಿಮಿತ್ತ ಖ್ಯಾತ ಸ್ಯಾಕ್ಸೋಫೋನ್ ವಾದಕ ಅಲೆವೂರು ಸುಂದರ ಸೇರಿಗಾರ(76) ಇಂದು(ಬುಧವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.

ಸುಂದರ ಸೇರಿಗಾರ್ ಕರಾವಳಿಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಸ್ಯಾಕ್ಸೋಫೋನ್‌ ಕಲಿಸಿಕೊಟ್ಟ ಗುರುಗಳಾಗಿದ್ದಾರೆ. ಗೌರವ ಡಾಕ್ಟರೇಟ್‌ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಇವರು ಪಡೆದುಕೊಂಡಿದ್ದಾರೆ. ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ  ಓರ್ವ ಪುತ್ರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!