Friday, June 5, 2026
Homeಕರಾವಳಿಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆದ ಜನಾರ್ದನ ರೆಡ್ಡಿ ಕುಟುಂಬ ; ಸಿಬಿಐ...

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆದ ಜನಾರ್ದನ ರೆಡ್ಡಿ ಕುಟುಂಬ ; ಸಿಬಿಐ ಕೋರ್ಟ್ ಶಾಕ್ ಬೆನ್ನಲ್ಲೇ ವಿಶೇಷ ಪೂಜೆ ಸಲ್ಲಿಸಿದ ರೆಡ್ಡಿ ಕುಟುಂಬ

- Advertisement -
- Advertisement -

ಬೆಳ್ತಂಗಡಿ : ಸಿಬಿಐ ವಿಶೇಷ ಕೋರ್ಟ್ ನಿಂದ ಜನಾರ್ದನ ರೆಡ್ಡಿ ಗೆ  ಶಾಕ್ ನೀಡಿದ ಬೆನ್ನಲ್ಲೇ ಬಳ್ಳಾರಿಯ ಜನಾರ್ದನ ರೆಡ್ಡಿ ಕುಟುಂಬ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಜನಾರ್ದನ ರೆಡ್ಡಿ , ಪತ್ನಿ ಅರುಣಾ ಲಕ್ಷ್ಮೀ , ಮಗಳು ರಮಿಣಿ ,ಆಳಿಯ ರಾಜೀವ್ ಹಾಗೂ ಅವರ ಕುಟುಂಬದವರು ಜೂನ್‌ 12 ರಾತ್ರಿ ಧರ್ಮಸ್ಥಳ ಸನ್ನಿಧಿ ವಸತಿ ಗೃಹಕ್ಕೆ ಆಗಮಿಸಿದ್ದರು . (ಇಂದು) ಜೂನ್ 13 ರಂದು ಬೆಳಗ್ಗೆ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಸರ್ವ ಸೇವೆ ಪೂಜೆ ಸಲ್ಲಿಸಿದರು‌‌.

ಕಳೆದ ಆರು ವರ್ಷಗಳಿಂದ ಮಂಜುನಾಥನ ದರ್ಶನ ಮಾಡಲು ಸಾಧ್ಯವಾಗಿಲ್ಲ. ಇಂದು ದರ್ಶನ ಪಡೆದಿದ್ದೇನೆ.‌ ನಿನ್ನೆ ಸಿಬಿಐ ವಿಶೇಷ ಕೋರ್ಟ್ ಪ್ರಕರಣ ಸಂಬಂಧ ಆಸ್ತಿ ಪಾಸ್ತಿ ಮಾರಾಟ ಮಾಡದಂತೆ ಸಿಬಿಐ  ಕೋರ್ಟ್ ಆದೇಶ ಮಾಡಿದೆ ಧರ್ಮಸ್ಥಳ ಮಂಜುನಾಥ ಧರ್ಮ ಮತ್ತು ನ್ಯಾಯವನ್ನು ಕೋಡುತ್ತಾನೆ. ಅವನು ದೇವರಾಗಿರುವ ಕಾರಣ ಅವನಿಂದ ಯಾವತ್ತು ನ್ಯಾಯನೇ ಸಿಗುತ್ತದೆ ಎಂದು ಜನಾರ್ದನ ರೆಡ್ಡಿ ಮಾಧ್ಯಮಕ್ಕೆ ತಿಳಿಸಿದರು‌.

- Advertisement -

Latest News

error: Content is protected !!