Thursday, June 4, 2026
Homeಕರಾವಳಿಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಆಗಿ ಸೂರಜ್ ಹೆಚ್ ಪೂಜಾರಿ ಆಯ್ಕೆ

ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಆಗಿ ಸೂರಜ್ ಹೆಚ್ ಪೂಜಾರಿ ಆಯ್ಕೆ

- Advertisement -
- Advertisement -

ಬೆಳ್ತಂಗಡಿ : ಕರ್ನಾಟಕ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಆಗಿ  ಬಡಗಕಾರಂದೂರಿನ ಸೂರಜ್ ಹೆಚ್ ಪೂಜಾರಿ ಆಯ್ಕೆಯಾಗಿದ್ದಾರೆ. ಸೂರಜ್ ಕರ್ನಾಟಕ ರಾಜ್ಯಕ್ಕೆ 20ನೇ ರ್ಯಾಂಕ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ರ್ಯಾಂಕ್ ಪಡೆದಿದ್ದಾರೆ.

2021 ರ  ಡಿಸೆಂಬರ್ ನಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿದ ಪಿಡಬ್ಲ್ಯೂಡಿ  ಇಲಾಖೆಯ ಕಿರಿಯ  ಇಂಜಿನಿಯರ್  ಹುದ್ದೆಯ ಸ್ಪರ್ಧಾತ್ಮಕ  ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ 20ನೇ Rank ಪಡೆದು ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ Rank ಪಡೆದಿದ್ದಾರೆ.

ಪ್ರಸ್ತುತ ಕಾರವಾರ ಜಿಲ್ಲೆಯ ಭಟ್ಕಳ  ತಾಲೂಕಿನ ಪಿಡಬ್ಲ್ಯೂಡಿ ಉಪವಿಭಾಗಕ್ಕೆ  ಕಿರಿಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಲು ಸರ್ಕಾರ ಸ್ಥಳ ನಿಯೋಜಿಸಿದೆ. ಇವರು ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮದ ಹಾನಿಂಜ ದಿವಂಗತ ವಾಸು ಪೂಜಾರಿ ಮತ್ತು ಸುಂದರಿ ಇವರ ಸುಪುತ್ರ.

- Advertisement -

Latest News

error: Content is protected !!