Wednesday, June 3, 2026
Homeಕರಾವಳಿಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಕೇಂದ್ರ ಕಚೇರಿಯ ಮುಖ್ಯ ಪ್ರಬಂಧಕ ಪುರುಷೋತ್ತಮ ಶೆಟ್ಟಿ ಪಾವಂಜೆ...

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಕೇಂದ್ರ ಕಚೇರಿಯ ಮುಖ್ಯ ಪ್ರಬಂಧಕ ಪುರುಷೋತ್ತಮ ಶೆಟ್ಟಿ ಪಾವಂಜೆ ನಿವೃತ್ತಿ

- Advertisement -
- Advertisement -

ಮಂಗಳೂರು; ಕರ್ತವ್ಯ ವೇ ದೇವರು ಎಂದು ಭಾವಿಸಿ ಪ್ರತೀ ದಿನವೂ ತನ್ನ ಅವಧಿ ಮೀರಿ ದುಡಿದು ಹಿಂದೆ ಕಾರ್ಪೊರೇಷನ್ ಬ್ಯಾಂಕ್ ಎಂಬ ಹೆಸರಿನಲ್ಲಿದ್ದ ಈಗಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರಿನ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಪ್ರಬಂಧಕ ಪುರುಷೋತ್ತಮ ಶೆಟ್ಟಿ ಪಾವಂಜೆಯವರು ಬ್ಯಾಂಕಿನ ಹಿರಿಯ ಅಧಿಕಾರಿಗಳ ಹೆಗ್ಗಳಿಕೆಯೊಂದಿಗೆ ತನ್ನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

ಬಾಗಲಕೋಟೆ ಸಹಿತ ರಾಜ್ಯದ ಇತರ ಕಡೆಗಳಲ್ಲಿ ಕಾರ್ಯನಿರ್ವಹಿಸಿದ ಇವರು ಪ್ರತಿಯೊಂದು ಶಾಖೆಗಳಲ್ಲಿ ತನ್ನದೇ ಆದ ಛಾಪನ್ನು ಗಳಿಸಿ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿ ಕಂಡು ಧಾರ್ಮಿಕ ಕ್ಷೇತ್ರದಲ್ಲೂ ಅವರದೇ ಆದ ಹೆಸರು ಗಳಿಸಿ ಪ್ರತಿಯೊಬ್ಬರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದರು.ಕೇಂದ್ರ ಕಚೇರಿಯ ಲ್ಲಿ ನಡೆದ ಅದ್ದೂರಿ ಬೀಳ್ಕೊಡುಗೆ ಸಮಾರಂಭದಲ್ಲಿ ಹಿರಿಯ ಅಧಿಕಾರಿಗಳು ಪುರುಷೋತ್ತಮ, ರಾಧಿಕಾ ದಂಪತಿಯನ್ನು ಸನ್ಮಾನಿಸಿ ಅವರ ಕಾರ್ಯ ವೈಖರಿಯ ಬಗ್ಗೆ ಶ್ಲಾಘಿಸಿ ಮುಂದಿನ ಜೀವನ ಯಶಸ್ವಿಯಾಗಲೆಂದು ಹಾರೈಸಿ ಬೀಳ್ಕೊಟ್ಟರು..ಈಗಾಗಲೇ ಪಾವಂಜೆಯಲ್ಲಿ ಔದುಂಬರಾ ಸನ್ನಿಧಿ ಎಂಬ ಧಾರ್ಮಿಕ ಕ್ಷೇತ್ರದ  ಮುಂದಾಳು ಆಗಿರುವ ಅವರಿಗೆ ಶ್ರೀ ದತ್ತಾತ್ರೇಯ ರ ಆಶೀರ್ವಾದ ಸಂಪೂರ್ಣ ಇರಲಿ ಎಂಬುದು ಅವರ ಅಭಿಮಾನಿಗಳ ಹಾಗೂ ಗುರು ಹಿರಿಯರ ಆಶಯವಾಗಿದೆ.

- Advertisement -

Latest News

error: Content is protected !!