Wednesday, July 2, 2025
Homeಕರಾವಳಿಮಂಗಳೂರು;ಮೆಹಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದ ವರ ಪತ್ತೆ

ಮಂಗಳೂರು;ಮೆಹಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದ ವರ ಪತ್ತೆ

spot_img
- Advertisement -
- Advertisement -

ಮಂಗಳೂರು;ಮೆಹಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದ ವರ ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾರೆ .ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ ಐತಪ್ಪ ಶೆಟ್ಟಿ ಅವರ ಪುತ್ರ ಕಿಶನ್‌ ಶೆಟ್ಟಿ ಮೆಹಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದರು. ನಿನ್ನೆ ಮಧ್ಯಾಹ್ನ ಕಿಶನ್‌ ಶೆಟ್ಟಿ ಅವರು ತನ್ನ ತಂಗಿಗೆ ಮೊಬೈಲ್ ಸಂದೇಶ ಕಳುಹಿಸಿ ನಾನು ಬಳ್ಳಾರಿಯಲ್ಲಿದ್ದೇನೆ. ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಮೇ 31ರಂದು ರಾತ್ರಿ ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲೆಂದು ಮಧ್ಯಾಹ್ನ ಹೋಗಿದ್ದ ಕಿಶನ್‌ ಶೆಟ್ಟಿ ನಾಪತ್ತೆಯಾಗಿದ್ದರು. ನಾನು ಬಳ್ಳಾರಿಯಲ್ಲಿ ಇದ್ದು, ಸ್ಕೂಟರ್ ಮೆಲ್ಕಾರ್ ಆರ್‌ಟಿಒ ಕಚೇರಿ ಮುಂದೆ ಇಟ್ಟಿದ್ದೇನೆ. ಆದರೆ ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ತಂಗಿ ಕರೆ ಮಾಡಲು ಯತ್ನಿಸಿದ್ದಾರೆ. ಆದರೆ ಕಿಶನ್‌ ಶೆಟ್ಟಿ ಮೊಬೈಲ್‌ ಸ್ವಿಚ್ ಆಫ್ ಮಾಡಿದ್ದಾನೆ ಎಂದು ಐತಪ್ಪ ಶೆಟ್ಟಿ ಅವರು ಕೊಣಾಜೆ ಠಾಣೆಗೆ ಹೋಗಿ ಕರೆ ಬಂದ ಬಗ್ಗೆ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!