Thursday, June 4, 2026
Homeಕರಾವಳಿತಾಕತ್ತಿದ್ದರೆ ಭಜರಂಗದಳ ಮತ್ತು ಆರ್.ಎಸ್.ಎಸ್ ಅನ್ನು ನಿಷೇಧಿಸಲಿ; ಸರಕಾರಕ್ಕೆ ಅರುಣ್ ಕುಮಾರ್ ಪುತ್ತಿಲ ಸವಾಲು

ತಾಕತ್ತಿದ್ದರೆ ಭಜರಂಗದಳ ಮತ್ತು ಆರ್.ಎಸ್.ಎಸ್ ಅನ್ನು ನಿಷೇಧಿಸಲಿ; ಸರಕಾರಕ್ಕೆ ಅರುಣ್ ಕುಮಾರ್ ಪುತ್ತಿಲ ಸವಾಲು

- Advertisement -
- Advertisement -

ಮಂಗಳೂರು; ಸಚಿವ ಪ್ರಿಯಾಂಕ ಖರ್ಗೆ ಅಗತ್ಯ ಬಿದ್ದರೆ ರಾಜ್ಯದಲ್ಲಿ ಭಜರಂಗದಳ ಮತ್ತು ಆರ್.ಎಸ್.ಎಸ್ ಅನ್ನು ನಿಷೇಧ ಮಾಡುತ್ತೇವೆ ಎಂಬ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಅರುಣ್ ಕುಮಾರ್ ಪುತ್ತಿಲ ತಿರುಗೇಟು ಕೊಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಗತ್ಯ ಬಿದ್ದರೆ ರಾಜ್ಯದಲ್ಲಿ ಭಜರಂಗದಳ ಮತ್ತು ಆರ್.ಎಸ್.ಎಸ್ ಅನ್ನು ನಿಶೇಧ ಮಾಡುತ್ತೇವೆ. ರಾಜ್ಯದಲ್ಲಿ ಇರುವುದಾದರೆ ಇರಿ,ಇಲ್ಲಾ ಪಾಕಿಸ್ತಾನಕ್ಕೆ ಹೋಗಿ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಈ ರೀತಿಯಾದಲ್ಲಿ ಇಡೀ ಹಿಂದೂ ಸಮಾಜವನ್ನು ಒಟ್ಟು ಸೇರಿಸಿ ದಿಟ್ಟ ಉತ್ತರ ನೀಡಲಾಗುವುದು ಎಂದಿದ್ದಾರೆ.

ರಾಜ್ಯ ಸರಕಾರ ತಾವು ಘೋಷಿಸಿದ ಗ್ಯಾರೆಂಟಿಗಳನ್ನು ಕೂಡಲೇ ಜನರಿಗೆ ತಲುಪಿಸುವ ಕೆಲಸ ಮಾಡಲಿ. ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಮಾಣಿಯಲ್ಲಿ ಮತ್ತು ಸುಳ್ಯದಲ್ಲಿ ಅಹಿತಕರ ಘಟನೆ ನಡೆದಿದ್ದು, ಈ ಘಟನೆಗಳನ್ನು ಖಂಡಿಸುವುದಾಗಿ ಅವರು ಹೇಳಿದ್ದಾರೆ..

- Advertisement -

Latest News

error: Content is protected !!