Thursday, June 4, 2026
Homeತಾಜಾ ಸುದ್ದಿ60ನೇ ವಯಸ್ಸಿನಲ್ಲಿ ಎರಡನೇ ವಿವಾಹವಾದ ಖ್ಯಾತ ಖಳ ನಟ ಆಶಿಷ್ ವಿದ್ಯಾರ್ಥಿ

60ನೇ ವಯಸ್ಸಿನಲ್ಲಿ ಎರಡನೇ ವಿವಾಹವಾದ ಖ್ಯಾತ ಖಳ ನಟ ಆಶಿಷ್ ವಿದ್ಯಾರ್ಥಿ

- Advertisement -
- Advertisement -

ಕೋಲ್ಕತ್ತಾ: ಖ್ಯಾತ ಖಳ ನಟ ಆಶಿಷ್ ವಿದ್ಯಾರ್ಥಿ  ತಮ್ಮ 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ. ಕೋಲ್ಕತ್ತಾದಲ್ಲಿ ಗುರುವಾರ ರೂಪಾಲಿ ಬರುವಾ ಎಂಬಾಕೆಯನ್ನು  ನಟ ಆಶಿಷ್ ವಿದ್ಯಾರ್ಥಿ  ವರಿಸಿದ್ದಾರೆ.  ಅಸ್ಸಾಂ ನಿವಾಸಿರೂಪಾಲಿ ಫ್ಯಾಷನ್ ವ್ಯವಹಾರದೊಂದಿಗೆ ಸಂಬಂಧ ಹೊಂದಿದ್ದಾರೆ.

ಮೊದಲು  ನಟ ಆಶಿಷ್ ಪ್ರಸಿದ್ಧ ನಟಿ ಶಕುಂತಲಾ ಬರುವಾ ಅವರ ಮಗಳು ರಾಜೋಶಿ ಬರುವಾ ಅವರನ್ನ ವಿವಾಹವಾಗಿದ್ದರು. ಅವರಿಂದ ದೂರವಾಗಿದ್ದ ಆಶಿಷ್ ರೂಪಾಲಿ ಅವರನ್ನು ವಿವಾಹವಾಗಿದ್ದಾರೆ.

ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಆಶಿಷ್ ತುಂಬಾ ಸರಳವಾಗಿ ಮದುವೆಯಾಗಿದ್ದಾರೆ. ಮದುವೆಯ ಬಗ್ಗೆ ಅವರು, ಈ ಹಂತದಲ್ಲಿ ರೂಪಾಲಿಯನ್ನ ಮದುವೆಯಾಗುವುದು ವಿಭಿನ್ನ ಭಾವನೆಯಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

Latest News

error: Content is protected !!